ಕೇರಳೀಯ ಸಿನೆಮಾ ಲೋಕಕ್ಕೆ ಮತ್ತೊಂದು ಆಘಾತ: ಮಳೆಯಾಳಂ- ತಮಿಳ್‌ನ ಯುವ ನಟ ಜಿಷ್ಣುರಾಘವನ್ ನಿಧನ

Update: 2016-03-26 04:36 GMT

 ಕೊಚ್ಚಿ, ಮಾರ್ಚ್,25: ಚಲನಚಿತ್ರ ನಟ ಜಿಷ್ಣು ರಾಘವನ್(35) ನಿಧನರಾಗಿದ್ದಾರೆ. ಬಹಳ ಸಮಯದಿಂದ ಅವರು ಕ್ಯಾನ್ಸರ್ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹಳೆತಲೆಮಾರಿನ ನಟ ರಾಘವನ್‌ರ ಪುತ್ರರಾಗಿದ್ದ ಅವರುಬೆಳಗೆ 8;15ಕ್ಕೆ ಮೃತರಾದರೆಂದು ವರದಿಯಾಗಿದೆ.

1987ರಲ್ಲಿ ಕಿಳಿಪಾಟ್ ಎಂಬ ಸಿನೆಮಾದಲ್ಲಿ ಬಾಲನಟನಾಗಿ ಅವರು ಮಳೆಯಾಳಂ ಸಿನೆರಂಗವನ್ನು ಪ್ರವೇಶಿಸಿದ್ದರು. ಆನಂತರ ಕಮಲ್‌ರ ನಮ್ಮಲ್ ಎಂಬ ಸಿನೆಮಾದೊಂದಿಗೆ ಅವರು ಸಿನೆಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಮಳೆಯಾಳಂ ತಮಿಳ್ ಸಹಿತ ಇಪ್ಪತ್ತೈದರಷ್ಟು ಸಿನೆಮಾಗಳಲ್ಲಿ ಜಿಷ್ಣು ಅಭಿನಯಿಸಿದ್ದಾರೆ. ಸಿನೆಮಾದಲ್ಲಿ ಸಕ್ರಿಯರಾಗಿದ್ದ ಸಂದರ್ಭದಲ್ಲಿಯೇ ಅವರಿಗೆ ಅರ್ಬುದ ರೋಗವಿರುವುದಾಗಿ ಪತ್ತೆಯಾಗಿತ್ತು.

ಇಡಪಳ್ಳಿ ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರು ಈಗ ಮೃತರಾಗಿದ್ದಾರೆ. ತಂದೆ ರಾಘವನ್ ಮತ್ತು ಬಂಧುಗಳು ಜಿಷ್ಣು ನಿಧನರಾಗುವ ಸಮಯದಲ್ಲಿ ಸಮೀಪ ಇದ್ದರು. ಮಾರ್ಚ್ ಐದರಂದು ಜಿಷ್ಣುರ ರೋಗ ಉಲ್ಬಣಿಸಿತ್ತು. ಆನಂತರ ಎರ್ನಾಕುಲಂ ಅಮೃತ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ದಿವಸ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾದ್ದರಿಂದ ಮತ್ತೆ ಐಸಿಯುಗೆ ಭರ್ತಿಮಾಡಲಾಗಿತ್ತು. ಬಹಳ ದಿನಗಳಿಂದ ಜಿಷ್ಣು ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಜಿಷ್ಣುವಿಗೆ ಆಸ್ಪತ್ರೆಯಲ್ಲಿ ಏನೋ ತೊಂದರೆಆಗಿದೆ ಎಂಬ ಊಹಾಪೋಹಗಳು ಹರಡಿದ್ದವು ಅದಕ್ಕೆಲ್ಲ ಸ್ವಯಂ ಜಿಷ್ಣು ಫೇಸ್ ಬುಕ್ ಮೂಲಕ ಉತ್ತರಿಸಿ ತಾನು ಒಂದು ಬಿಡುವಿನ ನಂತರ ಸಿನೆಮಾರಂಗಕ್ಕೆ ಮರಳಲಿದ್ದೇನೆಂದು ಅಭಿಮಾನಿಗಳಿಗೆ ತಿಳಿಸಿದ್ದರು.

ಉಹಾಪೋಹಗಳನ್ನು ನಿರಾಕರಿಸಿ ಜಿಷ್ಣುವಿನ ಕೆಲವು ಗೆಳೆಯರು ಮೊದಲು ರಂಗಪ್ರವೇಶಿಸಿದ್ದರು.ಆನಂತರ ಜಿಷ್ಣು ಸ್ವಯಂ ಫೇಸ್‌ಬುಕ್ ಸ್ಟೇಟಸ್ ಹಾಕಿದ್ದರು. ಆನಂತರ ಅಭಿಮಾನಿಗಳು ಅವರ ರೋಗಗುಣಮುಖರಾಗಲು ಪ್ರಾರ್ಥಿಸತೊಡಗಿದ್ದರು. ಇದರ ನಡುವೆ ಜಿಷ್ಣು ನಿಧನ ಸುದ್ದಿ ಅನಿರೀಕ್ಷಿತವಾಗಿ ಹೊರಬಂದಿದೆಎಂದು ವರದಿಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News