ಈ ಬಾರಿ ಪಿಯು ಫಲಿತಾಂಶ ಸರಕಾರಿ ವೆಬ್‌ಸೈಟ್‌ನಲ್ಲಿ ಮಾತ್ರ

Update: 2016-03-29 18:35 GMT

ಬೆಂಗಳೂರು, ಮಾ.29: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ಹೇಳಿದೆ.

ಈ ಬಗ್ಗೆ ಮಾತನಾಡಿದ ಪಿಯು ಮಂಡಳಿ ನಿರ್ದೇಶಕಿ ಪಲ್ಲವಿ ಅಕುರಾತಿ, ಕಳೆದ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದ ಸಂದರ್ಭದಲ್ಲಿ ಖಾಸಗಿ ವೆಬ್‌ಸೈಟ್‌ಗಳಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ, ಈ ಬಾರಿ ಗೊಂದಲ ನಿವಾರಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ವಿದ್ಯಾರ್ಥಿಗಳು ಏಕಕಾಲದಲ್ಲಿ ವೆಬ್‌ಸೈಟ್‌ಗೆ ಭೇಟಿ ನೀಡುವ ಪರಿಣಾಮ ಸರ್ವರ್‌ನಲ್ಲಿ ಏರು ಪೇರು ಆಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಎಲ್ಲರಿಗೂ ವೇಗವಾಗಿ ಫಲಿತಾಂಶ ನೋಡುವ ಭಾಗ್ಯ ಕಲ್ಪಿಸಲು ಖಾಸಗಿ ಕಂಪೆನಿಗಳಿಗೆ ಫಲಿತಾಂಶದ ಮಾಹಿತಿಯುಳ್ಳ ಸಿಡಿಯನ್ನು ನೀಡಲಾಗುತಿತ್ತು. ಆದರೆ, ಕಳೆದ ವರ್ಷ ಕೆಲ ವೆಬ್‌ಸೈಟ್‌ಗಳು ಸರಿಯಾಗಿ ಮಾಹಿತಿಯನ್ನು ಶೇಖರಿಸದ ಕಾರಣ ಫಲಿತಾಂಶದಲ್ಲಿ ಗೊಂದಲ ಉಂಟಾಗಿತ್ತು.


ಫಲಿತಾಂಶ ಇಲ್ಲಿ ಮಾತ್ರ ಲಭ್ಯ
http://karnatakaeducation.gov.in/
http://pue.kar.nic.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News