ಸರಕಾರಿ ನೌಕರರ ತುಟ್ಟಿಭತ್ತೆ ಶೇ.3.5ರಷ್ಟು ಹೆಚ್ಚಳ

Update: 2016-04-13 18:42 GMT

ಬೆಂಗಳೂರು, ಎ.13: ರಾಜ್ಯ ಸರಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಸರಕಾರವು ಯುಗಾದಿ ನಂತರ ಸಿಹಿ ಸುದ್ದಿ ಹೊರಡಿಸಿದೆ. ಜನವರಿಯಿಂದ ಅನ್ವಯವಾಗುವಂತೆ ಶೇ.3.50ರಷ್ಟು ತುಟ್ಟಿಭತ್ತೆ ಮಂಜೂರು ಮಾಡಿ ಸರಕಾರ ಬುಧವಾರ ಆದೇಶ ಹೊರಡಿಸಿದೆ.

ಹಾಲಿ ಲಭ್ಯವಿರುವ ತುಟ್ಟಿಭತ್ತೆ ದರವನ್ನು ಮೂಲವೇತನದ ಶೇ.32.5ರಿಂದ ಶೇ.36ಕ್ಕೆ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು 2016ನೆ ಸಾಲಿನ ಜನವರಿ 1ರಿಂದಲೆ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News