ಈಗ ವಿ ಎಚ್ ಪಿಗೆ ಶಿಮ್ಲಾದ ಹೆಸರು ಬದಲಾಯಿಸಬೇಕಂತೆ !

Update: 2016-04-15 06:35 GMT

ನವದೆಹಲಿ : ಹರ್ಯಾಣಾದ ಗುರ್ಗಾಂವ್ ನಗರವನ್ನು ಗುರುಗ್ರಾಮ್ ಎಂದು ಬದಲಾಯಿಸಿದ ನಂತರ ವಿಶ್ವ ಹಿಂದೂ ಪರಿಷದ್ ಇದೀಗಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾವನ್ನು ಶ್ಯಾಮ್ಲಾ ಎಂದುಬದಲಾಯಿಸಬೇಕೆಂಬ ಸಲಹೆ ನೀಡಿದೆಯೆಂದು ಟ್ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ವರದಿಯ ಪ್ರಕಾರವಿ ಎಚ್ ಪಿ ಡಾಲ್ ಹೌಸೀ ಹಿಲ್‌ಸ್ಟೇಶನ್‌ಗೆ ನೇತಾಜಿ ಸುಭಾಸ್ ಚಂದ್ರ ಬೋಸ್ ಹೆಸರಿಡಬೇಕೆಂದು ಹಾಗೂ ಶಿಮ್ಲಾದ ಐತಿಹಾಸಿಕ ಪೀಟರ್‌ಹೋಫ್ ಕಟ್ಟಡಕ್ಕೆ ವಾಲ್ಮೀಕಿ ಸದನ್ ಎಂದು ಹೆಸರಿಡಬೇಕೆಂದುಹೇಳಿದೆ.

ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ನೆನಪಿಸುವ ಐತಿಹಾಸಿಕ ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಸಲಹೆಯನ್ನು ಪರಿಗಣಿಸಬೇಕೆಂದು ಹಾಗೂ ಈ ಬಗ್ಗೆ ರಾಜ್ಯ ಸರಕಾರ ಹಾಗೂ ಕೇಂದ್ರದೊಂದಿಗೆ ಮಾತುಕತೆ ನಡೆಸಬೇಕೆಂದುವಿ ಎಚ್ ಪಿ ಹಿರಿಯ ಸದಸ್ಯ ಮನೋಜ್ ಕುಮಾರ್ರಾಜ್ಯಪಾಲ ಆಚಾರ್ಯರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News