ಕೇರಳದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಅತ್ಯಾಚಾರ!

Update: 2016-05-05 07:15 GMT

ಅಟ್ಟಿಂಗಲ್, ಮೇ 5: ಮನೆಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ವಯಸ್ಸಾದ ಮಹಿಳೆಯೊಬ್ಬರನ್ನು ಅತ್ಯಾಚಾರಗೈದ ಹಿನ್ನೆಲೆಯಲ್ಲಿ ಮಹಿಳೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾದ ಘಟನೆ ಕೇರಳದ ಚಿರಯಿನ್ ಕೀಯ ಎಂಬಲ್ಲಿಂದ ವರದಿಯಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ 68 ವರ್ಷದ ವೃದ್ಧೆಯಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ಮಕ್ಕಳೊಂದಿಗೆ ವಾಸಿಸುವ ಮಹಿಳೆ ತನ್ನ ಖಾಲಿ ಮನೆಯನ್ನು ಗುಡಿಸಿ ಶುಚಿ ಮಾಡಲು ಬಂದಿದ್ದರು. ಅವರು ಆಗಾಗ ಮನೆಯನ್ನುಶುಚಿಗೊಳಿಸಲು ಬರುವುದು ರೂಢಿಯಾಗಿತ್ತು. ಹೀಗೆ ಬಂದರೆ ಅಲ್ಲಿ ಒಂದು ದಿವಸ ಉಳಿದು ಮರುದಿವಸ ಮರಳುವುದು ಅವರ ರೂಢಿಯಾಗಿತ್ತು. ಬುಧವಾರ ಬೆಳಗ್ಗೆ ಮನೆಯ ಬಾಗಿಲನ್ನು ಒಡೆದು ಮನೆಒಳಗೆ ನುಗ್ಗಿದ ವ್ಯಕ್ತಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ವಿರೋಧಿಸಿದಕ್ಕೆ ಹೊಡೆದಿದ್ದ. ಆನಂತರ ಬಟ್ಟೆಗಳನ್ನೆಲ್ಲ ಬಿಚ್ಚಿ ಎಸೆದು ಅತ್ಯಾಚಾರವೆಸಗಿದ್ದನೆನ್ನಲಾಗಿದೆ.

  ಸುಮಾರು ಒಂದು ಗಂಟೆವರೆಗೆ ಆತ ಮುದುಕಿಗೆ ಕಿರುಕುಳ ಕೊಟ್ಟಿದ್ದು. ಮನೆಯ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿದ್ದ, ಮೊಬೈಲ್ ಫೋನ್ ಸಹಿತ ಕೆಲವು ಸಾಮಗ್ರಿಗಳನ್ನು ನಾಶ ಪಡಿಸಿದ್ದ. ಯಾರಿಗಾದರೂ ಹೇಳಿದರೆ ಕೊಂದು ಹಾಕುವೆ ಎಂದು ಬೆದರಿಸಿದ ನಂತರ ಹೊರಟು ಹೋಗಿದ್ದನೆನ್ನಲಾಗಿದೆ. ತೀರಾ ನಿತ್ರಾಣಗೊಂಡಿದ್ದ ಮಹಿಳೆಯು ಸುಮಾರು ಹೊತ್ತಿನ ನಂತರ ಸುಧಾರಿಸಿಕೊಂಡು ಹತ್ತಿರದ ಮನೆಯವರಿಗೆ ತಿಳಿಸಿದ್ದರು. ಅವರು ಪಂಚಾಯತ್ ಸದಸ್ಯರಿಗೆ ವಿಷಯ ತಿಳಿಸಿದರು. ಬೆಳಗ್ಗೆ ಆರು ಗಂಟೆಗೆ ಪಂಚಾಯತ್ ಸದಸ್ಯರೊಂದಿಗೆ  ಪೊಲೀಸ್‌ಸ್ಟೇಶನ್‌ಗೆ ಹೋಗಿ ದೂರು ನೀಡಿದ್ದರು. ಪೊಲೀಸರು ಮಹಿಳೆಯನ್ನು ವರ್ಕಲ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸಿದ್ದರು. ಕೋರ್ಟ ಸೂಚನೆ ಪ್ರಕಾರ ತಾಲೂಕ್ ಆಸ್ಪತ್ರೆಗೆ ಮಹಿಳೆಯನ್ನು ಸೇರಿಸಲಾಗಿದೆ. ದೇಹವಿಡಿಗಾಯಗಳಾಗಿವೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂಧಿಸಲಾದ ಆರೋಪಿಯ ವಿರುದ್ಧ ಗೃಹಣಿಯೊಬ್ಬರು ಒಂದೂವರೆ ತಿಂಗಳ ಮೊದಲು ಪೊಲೀಸರಿಗೆ ದೂರು ನೀಡಿದ್ದರು. ಅತ್ಯಾಚಾರಕ್ಕೊಳಗಾದ ವೃದ್ಧ ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News