ಅತ್ಯಂತ ಹೇಯ : ಹೀಗೂ ಒಬ್ಬ ಸ್ವಾಮೀಜಿ, ಹೀಗೂ ಒಬ್ಬ ಸಂಸದ !

Update: 2016-05-05 12:07 GMT

ಹೊಸದಿಲ್ಲಿ,ಮೇ 5: ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಉಪಸ್ಥಿತಿಯಲ್ಲಿ ಬಾಲಕಿಯೋರ್ವಳು ತನ್ನ ಜೀನ್ಸ್‌ನ ಬಟನ್‌ಗಳನ್ನು ಬಿಚ್ಚುವಂತೆ ಮಾಡಿದ ಮತ್ತು ಸಂಸದರು ಈ ಪ್ರಕ್ರಿಯೆಯ ವೌನಪ್ರೇಕ್ಷಕರಾಗುಳಿದ ಕಳವಳಕಾರಿ ವೀಡಿಯೊವೊಂದು ವೈರಲ್ ಆಗಿದೆ.

ವರದಿಗಳು ತಿಳಿಸಿರುವಂತೆ ಉತ್ತರ ಪ್ರದೇಶದ ಮೈನಪುರಿಯಲ್ಲಿ ಬಿಜೆಪಿ ಕಾರ್ಯಕರ್ತ ಮದನ ಸಿಂಗ್ ಎಂಬಾತನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರು ದೌರ್ಜನ್ಯಗಳನ್ನೆಸಗಿದ್ದಾರೆ ಎನ್ನುವುದು ಸಿಂಗ್ ಕುಟುಂಬದ ಆರೋಪ. ಉನ್ನಾವ್ ಸಂಸದ ಸಾಕ್ಷಿ ಮಹಾರಾಜ್ ಕೂಡ ಸಿಂಗ್ ಕುಟುಂಬವನ್ನು ಭೇಟಿಯಾಗಲು ಅಲ್ಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಬಾಲಕಿಯೋರ್ವಳು ಅವರ ಎದುರಿನಲ್ಲಿಯೇ ತನ್ನ ಜೀನ್ಸ್‌ನ ಬಟನ್‌ಗಳನ್ನು ಬಿಚ್ಚುವಂತೆ ಮಾಡಲಾಗಿತ್ತು. ಪೊಲೀಸರ ಹಲ್ಲೆಯಿಂದ ಬಾಲಕಿಗೆ ಆಗಿರುವ ಗಾಯಗಳನ್ನು ಸಾಕ್ಷಿ ವೀಕ್ಷಿಸುತ್ತಿರುವ ಈ ವೀಡಿಯೊ ಈಗ ವೈರಲ್ ಆಗಿಬಿಟ್ಟಿದೆ.

ಈ ದೌರ್ಜನ್ಯಕ್ಕೆ ಗುಂಡುಗಳಿಂದ ಪ್ರತ್ಯುತ್ತರ ನೀಡುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡುವ ಪ್ರಚೋದನಾಕಾರಿ ಭಾಷಣವನ್ನು ಈ ಸಂದರ್ಭ ಸಾಕ್ಷಿ ಮಾಡಿದ್ದಾಗಿ ಆರೋಪಿಸಲಾಗಿದೆ. ದ್ವೇಷ ಭಾಷಣ ಮಾಡಿದ್ದಕ್ಕಾಗಿ ಸಾಕ್ಷಿ ವಿರುದ್ಧ ಬಿಚ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

ಕೃಪೆ: www.jantakareporter.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News