ನೀಟ್‌ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಂಕಿತ

Update: 2016-05-24 05:21 GMT


ಹೊಸದಿಲ್ಲಿ, ಮೇ 24:  ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಏಕೀಕೃತ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು  (ನೀಟ್) ಒಂದು ವರ್ಷಗಳ ಕಾಲ ಮುಂದೂಡುವ ಬಗ್ಗೆ  ಕೇಂದ್ರ ಸರಕಾರ  ಶುಕ್ರವಾರ ಹೊರಡಿಸಿರುವ ಸುಗ್ರೀವಾಜ್ಞೆಗೆ  ಮಂಗಳವಾರ  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದಾರೆ.
ವೈದ್ಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಈ ವರ್ಷದ ಮಟ್ಟಿಗೆ ರಾಜ್ಯ  ಸರಕಾರ ಪ್ರವೇಶ ಪರೀಕ್ಷೆ (ಸಿಇಟಿ)ಗಳಿಗೆ ಅವಕಾಶ ಮಾಡಿಕೊಡಲು ಕೇಂದ್ರ ಸರಕಾರ ಶುಕ್ರವಾರ ಕೈಗೊಂಡಿದ್ದ  ಸುಗ್ರೀವಾಜ್ಞೆಗೆ ಸಹಿಗಾಗಿ  ರಾಷ್ಟ್ರಪತಿ ಅವರಿಗೆ  ಕಳುಹಿಸಿಕೊಡಲಾಗಿತ್ತು.  
ಇದೀಗ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಹಾಕುವುದರೊಂದಿಗೆ ಕರ್ನಾಟಕ, ತಮಿಳುನಾಡು, ಕೇರಳ, ಗುಜರಾತ್ ಮಹಾರಾಷ್ಟ್ರ ಮತ್ತು ಪಂಜಾಬ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಇದರೊಂದಿಗೆ ಸರಕಾರಿ  ಕಾಲೇಜುಗಳ ಸೀಟುಗಳ ಜತೆಗೆ ಖಾಸಗಿ ಕಾಲೇಜುಗಳಲ್ಲಿನ ಸರಕಾರದ  ಕೋಟಾದ ಸೀಟುಗಳ ಹಂಚಿಕೆ ಸಿಇಟಿ ಮೂಲಕವೇ ನಡೆಯಲಿದೆ. ಆದರೆ, ಕಾಮೆಡ್‌-ಕೆ ಯುಜಿಇಟಿ ಮೂಲಕ ಹಂಚಿಕೆಯಾಗುತ್ತಿದ್ದ ಮ್ಯಾನೇಜ್‌ಮೆಂಟ್‌ ಕೋಟಾದ ಸೀಟುಗಳು ಮಾತ್ರ ನೀಟ್‌ ಮೂಲಕವೇ ಹಂಚಿಕೆಯಾಗಲಿವೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News