×
Ad

ನೊಯ್ಡಾ |ಶೌಚ ಗುಂಡಿನ ಸ್ವಚ್ಛತೆ ವೇಳೆ ವಿಷಾನಿಲ ಸೇವನೆ; ಇಬ್ಬರು ನೈರ್ಮಲ್ಯ ಕಾರ್ಮಿಕರ ಸಾವು

Update: 2024-05-05 21:00 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ನೊಯ್ಡಾದ ಮನೆಯೊಂದರಲ್ಲಿ ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ವಿಷಾನಿಲ ಸೇವನೆಯಿಂದಾಗಿ ಕನಿಷ್ಠ ಇಬ್ಬರು ನೈರ್ಮಲ್ಯ ಕಾರ್ಮಿಕರು ಸಾವನ್ನಪ್ಪಿದ್ದಾರೆಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನೂನಿ ಮಂಡಲ್ ಹಾಗೂ ತಪನ್ ಮಂಡಲ್ ಎಂಬವರು ಶುಕ್ರವಾರ ರಾತ್ರಿ ನೊಯ್ಡಾದ ಸೆಕ್ಟರ್ 26ರಲ್ಲಿರುವ ಸುಮಿತ್ ಚಾವ್ಲಾ ಎಂಬವರ ನಿವಾಸದ ಶೌಚಗುಂಡಿಯ ಸ್ವಚ್ಛತೆಯಲ್ಲಿ ತೊಡಗಿದ್ದಾಗ ಇಬ್ಬರೂ ಪ್ರಜ್ಞೆ ತಪ್ಪಿದ್ದರು. ರಾತ್ರಿ 11.15ರ ವೇಳೆಗೆ ಅರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರೆಂದು ನೊಯ್ಡಾದ ಪೊಲೀಸ್ ಉಪ ಆಯುಕ್ತ ವಿದ್ಯಾಸಾಗರ್ ಮಿಶ್ರಾ ತಿಳಿಸಿದ್ದಾರೆ. ಇಬ್ಬರೂ ಕಾರ್ಮಿಕರು ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯವರಾಗಿದ್ದು, ಅವರು ನೊಯ್ಡಾದ ಸೆಕ್ಟರ್ 9 ರಲ್ಲಿರುವ ಕೊಳೆಗೇರಿಯೊಂದರಲ್ಲಿ ವಾಸವಾಗಿದ್ದರು. ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಮೃತರ ಕುಟುಂಬಿಕರಿಗೆ ಮಾಹಿತಿಯನ್ನು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News