×
Ad

ತ್ರಿಪುರಾ |ನಾಲ್ವರು ಮಕ್ಕಳು ಸೇರಿದಂತೆ 11 ಬಾಂಗ್ಲಾದೇಶಿ ಪ್ರಜೆಗಳ ಬಂಧನ

Update: 2024-05-05 23:40 IST

ಸಾಂದರ್ಭಿಕ ಚಿತ್ರ

ಅಗರ್ತಲಾ : ಸೂಕ್ತ ದಾಖಲೆಗಳಿಲ್ಲದೆ ಭಾರತದ ಗಡಿಯನ್ನು ದಾಟುತ್ತಿದ್ದ ನಾಲ್ವರು ಮಕ್ಕಳು ಸೇರಿದಂತೆ 11 ಬಾಂಗ್ಲಾದೇಶಿ ಪ್ರಜೆಗಳನ್ನು ಶನಿವಾರ ತ್ರಿಪುರಾದ ಧಲಾಯಿ ಜಿಲ್ಲೆಯಲ್ಲಿ ಪೋಲಿಸರು ಬಂಧಿಸಿದ್ದಾರೆ.

ಈ ಗುಂಪು ಧಲಾಯಿ ಜಿಲ್ಲೆಯ ಗಂಡಾಚೆರ್ರಾ ಉಪವಿಭಾಗದ ಮೂಲಕ ಸ್ವದೇಶ ಬಾಂಗ್ಲಾದೇಶಕ್ಕೆ ಮರಳಲು ಪ್ರಯತ್ನಿಸುತ್ತಿತ್ತು. ಮಾಹಿತಿ ತಿಳಿದು ಧಲಾಯಿ ಜಿಲ್ಲೆಯ ಗಡಿಗ್ರಾಮ ಮಚ್ಕುಮಿರ್ನಲ್ಲಿ ದಾಳಿ ನಡೆಸಿದ ಪೋಲಿಸರು ತಂಡದಲ್ಲಿದ್ದ 11 ಜನರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಭಾರತೀಯ ಪಾಸ್ಪೋರ್ಟ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ರವಿವಾರ ತಿಳಿಸಿದರು.

ಸುಮಾರು ಒಂದು ತಿಂಗಳ ಹಿಂದೆ ಈ ಬಾಂಗ್ಲಾದೇಶಿಗಳು ಗಂಡಾಚೆರ್ರಾ ಪ್ರದೇಶದಲ್ಲಿ ಗಡಿಯನ್ನು ದಾಟಿ ಬೆಂಗಳೂರಿಗೆ ತೆರಳಿದ್ದರು. ಅವರ ಬಳಿಯಿದ್ದ ರೈಲು ಟಿಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ರೈಲಿನ ಮೂಲಕ ಬೆಂಗಳೂರಿನಿಂದ ಕೋಲ್ಕತಾ ಮಾರ್ಗವಾಗಿ ತ್ರಿಪುರಾದ ಅಂಬಾಸಾ ತಲುಪಿದ್ದರು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News