ಕಾಂಗ್ರೆಸ್ ಮನಸ್ಥಿತಿಯವರಿಗೆ 'ರಾಜೀವ್ ಗಾಂಧಿ ಆತ್ಮಹತ್ಯೆ ಯೋಜನೆ' ಬರಲಿ ಎಂದ ಮೋದಿ ಭಕ್ತೆ ತಹಶೀಲ್ದಾರ್!

Update: 2016-06-09 08:58 GMT

ಭೋಪಾಲ್, ಜೂ.9: ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಫೇಸ್‌ಬುಕ್‌ನಲ್ಲಿ ಮಾಜಿ ಪ್ರಧಾನಿ ಜವಹರ ಲಾಲ್ ನೆಹರೂ ಅವರನ್ನು ಪ್ರಶಂಸಿಸಿದ ಕಾರಣಕ್ಕೆ ವರ್ಗಾವಣೆಗೊಳಗಾದ ಪ್ರಕರಣ ತಣ್ಣಗಾಗುವ ಮೊದಲೇ ಇನ್ನೊಂದು ಅಧಿಕಾರಿ ವಿವಾದ ಸೃಷ್ಟಿಸಿದ್ದಾರೆ.

ಈ ಮಹಿಳಾ ತಹಶೀಲ್ದಾರ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಹೊಗಳಿಕೆಯನ್ನು ಜೀಣಿಸಿಕೊಳ್ಳಲಾಗದ 'ಕಾಂಗ್ರೆಸಿ' ಹಾಗೂ 'ಸೆಕ್ಯುಲರ್' ಮನಸ್ಥಿತಿಯ ಮೇಲೆ ಹರಿಹಾಯ್ದಿದ್ದಾರೆ.

ಮಂಗಳವಾರದ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ರತ್ಲಾಂನ ತಹಶೀಲ್ದಾರ್ ಅಮಿತಾ ಸಿಂಗ್ ಅವರು, ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದ 'ಸೆಕ್ಯುಲರ್' ಹಾಗೂ 'ಕಾಂಗ್ರೆಸ್' ಮನಸ್ಥಿತಿಯವರು ಆತ್ಮಹತ್ಯೆ ಮಾಡಿಕೊಳ್ಳಲು ಅನುಕೂಲವಾಗುವಂತೆ ರಾಜೀವ ಗಾಂಧಿ ಆತ್ಮಹತ್ಯೆ ಯೋಜನೆಯೊಂದನ್ನು ಪ್ರಾರಂಭಿಸುವಂತೆ ಪ್ರಧಾನಿ ಮೋದಿಯವರಲ್ಲಿ ವಿನಂತಿಸಿದ್ದಾರೆ.

ತಮ್ಮ ಫೇಸ್‌ಬುಕ್ ಪೋಸ್ಟ್‌ನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಈ ಮಹಿಳಾ ಅಧಿಕಾರಿ ನಾನು ಈ ದೇಶದ ಒಬ್ಬ ಪ್ರಜೆ. ನನಗೂ ಅಭಿವ್ಯಕ್ತಿ ಸ್ವಾತಂತ್ರವಿದೆ. ನಾಳೆ ಮೋದಿಯವರು ಸಿಪಿಎಂ ಪಕ್ಷ ಸೇರಿದರೂ ನಾನು ಅವರನ್ನು ಪ್ರಶಂಸಿಸುತ್ತಲೇ ಇರುತ್ತೇನೆ. ನನಗೆ ಅವರು ಅಷ್ಟು ಇಷ್ಟ ಎಂದು ಹೇಳಿದ್ದು, ಈ ಪೋಸ್ಟ್‌ನಿಂದ ಯಾರದ್ದೇ ಭಾವನೆಗೆ ಘಾಸಿ ಉಂಟುಮಾಡುವ ಉದ್ದೇಶ ನನಗಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ತಹಶೀಲ್ದಾರ್ ಅವರ ಈ ಹೇಳಿಕೆ ನೀತಿಸಂಹಿತೆಯ ಉಲ್ಲಂಘನೆಯಾಗಿದ್ದು, ಪುರಾವೆ ಸಿಕ್ಕಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಹೇಳಿದ್ದಾರೆ. ಈಗ ತಹಶೀಲ್ದಾರ್‌ಗೆ ಜಿಲ್ಲಾ ಪಂಚಾಯತ್ ಸಿಇಒ ನೋಟಿಸ್ ನೀಡಿದ್ದು, ವಾರದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News