ಮುಸ್ಲಿಂ ವಿರೋಧಿ ಪ್ರಚಾರ: ಸಾಧ್ವಿ ಪ್ರಾಚಿ ವಿರುದ್ಧ ದೂರು ಕೊಟ್ಟಿದ್ದೇನೆ - ರಾಹುಲ್ ಈಶ್ವರನ್

Update: 2016-06-10 05:30 GMT

ಕೊಚ್ಚಿ, ಜೂನ್ 10: ಮುಸ್ಲಿಂ ಮುಕ್ತ ಭಾರತ ಕಟ್ಟಬೇಕೆಂದು ಘೋಷಿಸಿದ ವಿಹಿಂಪ ನಾಯಕಿ ಸಾಧ್ವಿ ಪ್ರಾಚಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಬಿಜೆಪಿ ಹಿತೈಶಿ ರಾಹುಲ್ ಈಶ್ವರ್ ಹೇಳಿದ್ದಾರೆ.

ನಾನು ಹಿಂದೂ ಮತ್ತು ಭಾರತೀಯ. ಭಾರತದ ಮುಸ್ಲಿಮರು, ಕ್ರೈಸ್ತರು ಹಾಗೂ ಯಾವುದೇ ವಿಶ್ವಾಸ ವಿಲ್ಲದ ಜನರು ನನ್ನ ಸಹೋದರರು ಸಹೋದರಿಗಳು. ಭಾರತ ಜಗತ್ತಿನಲ್ಲಿ ಎರಡನೆ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶವಾಗಿದೆ. ಅವರ ಹಿತಾಕಾಂಕ್ಷೆ ಅವರ ವಿಶ್ವಾಸ ಎಲ್ಲ ನಮ್ಮ ಜವಾಬ್ದಾರಿಯೂ ಆಗಿದೆ. ಮುಸ್ಲಿಂ ಮುಕ್ತ ಭಾರತವಲ್ಲ ಮುಸ್ಲಿಂ-ಹಿಂದೂ-ಕ್ರೈಸ್ತರಿಗೆ ಪರಿಪೂರ್ಣ ಸ್ವಾತಂತ್ರ್ಯವಿರುವ ಭಾರತ ಬೇಕಾಗಿದೆ ಎಂದು ರಾಹುಲ್ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸಾಧ್ವಿ ಪ್ರಾಚಿಯ ವಿವಾದ ವೀಡಿಯೊವನ್ನು ಇಂಟರ್‌ನೆಟ್‌ನಿಂದ ತೆಗೆದು ಹಾಕಬೇಕೆಂದು ಈಶ್ವರ್ ದೂರಿನಲ್ಲಿ ಆಗ್ರಹಿಸಿದ್ದಾರೆ. ಪೊಲೀಸ್ ಕಮಿಶನರ್‌ರೊಡನೆ ವಿವರವಾಗಿ ಚರ್ಚಿಸಿದ್ದಾಗಿಯೂ ರಾಹುಲ್ ಹೇಳಿದ್ದಾರೆ. “ಕಾಂಗ್ರೆಸ್ ಮುಕ್ತಭಾರತ” ಎಂಬುದನ್ನು ಸಾಧಿಸಿದ್ದಾಯಿತು. ಇನ್ನು “ಮುಸ್ಲಿಂ ಮುಕ್ತಭಾರತ”ವನ್ನು ಜಾರಿಗೆ ತರುವ ಸಮಯವಾಯಿತು ಎಂದು ಸಾಧ್ವಿ ಪ್ರಾಚಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News