ಸಚಿವ ಸಂಪುಟ ಪುನಾರಚನೆ: ಡಜನ್‌ ಮಂತ್ರಿಗಳು ಹೊರಕ್ಕೆ-ಹೊಸಬರು ಒಳಕ್ಕೆ ?

Update: 2016-06-17 06:02 GMT


ಹೊಸದಿಲ್ಲಿ, ಜೂ.17: ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿರುವ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆಯ ಕಡೆಗೆ ಗಮನ ಹರಿಸಿದ್ದಾರೆ. ಇಂದು  ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ಕೈ ಬಿಡುವ ಸಚಿವರ ಮತ್ತು ಇವರ ಬದಲಿಗೆ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಪ್ರಸ್ತುತ ಸಚಿವ ಸಂಪುಟದಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಸಚಿವರ ಪೈಕಿ  ಹನ್ನೆರಡು ಮಂದಿ ಸಚಿವರನ್ನು ಕೈ ಬಿಡಲಾಗುವುದು ಮತ್ತು ತೆರವಾಗಿರುವ ಸ್ಥಾನಕ್ಕೆ ಅಷ್ಟೇ ಸಚಿವರುಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಹೊಸದಿಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಬಗ್ಗೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಈಗಾಗಲೇ ತಯಾರಿಸಲಾದ ಸಚಿವ  ಸಂಪುಟದಿಂದ ಕೈ ಬಿಡುವವರ ಪಟ್ಟಿ ಹಾಗೂ ಹೊಸದಾಗಿ ಸೇರ್ಪಡೆಯಾಗಲಿರುವ ಸಚಿವರ ವಿವರ ಇರುವ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟಕ್ಕೆ ಸಂಭವನೀಯ ಸೇರ್ಪಡೆ
*ಕಾಗೋಡು ತಿಮ್ಮಪ್ಪ
*ರಮೇಶ್‌ ಕುಮಾರ್‌
*ಡಾ.ಎ.ಬಿ.ಮಾಲಕರೆಡ್ಡಿ
*ಸಂತೋಷ್‌ ಲಾಡ್‌/ಶ್ರೀನಿವಾಸ್ ಮಾನೆ
*ಆರ್‌.ಬಿ.ತಿಮ್ಮಾಪುರ
*ರುದ್ರಪ್ಪ ಲಮಾನಿ
*ಪ್ರಿಯಾಂಕ್ ಖರ್ಗೆ
*ಮೋಟಮ್ಮ
*ಎಂ.ಕೃಷ್ಣಪ್ಪ
*ಎಸ್.ಎಸ್.ಮಲ್ಲಿಕಾರ್ಜುನ್‌
*ಈಶ್ವರ ಖಂಡೆ
*ಡಾ.ಸುಧಾಕರ‍್/ಎಸ್‌.ಟಿ.ಸೋಮಶೇಖರ‍್
ಸಂಭವನೀಯ ತರೆವು
*ವಿನಯಕುಮಾರ್‌ ಸೊರಕೆ
*ವಿ.ಶ್ರೀನಿವಾಸ್‌ಪ್ರಸಾದ್‌
*ಅಂಬರೀಷ್
*ಕೃಷ್ಣ ಬೈರೇಗೌಡ
*ದಿನೇಶ್‌ ಗುಂಡೂರಾವ್‌
*ಶಾಮನೂರು ಶಿವಶಂಕರಪ್ಪ
*ಅಭಯ್‌ಚಂದ್ರ ಜೈನ್‌
*ಪರಮೇಶ್ವರ ನಾಯ್ಕ್‌
*ಖಮರುಲ್‌ ಇಸ್ಲಾಂ
*ಬಾಬುರಾವ್‌ ಚಿಂಚನಸೂರ್‌
*ಎಚ್.ಆಂಜನೀಯ
*ಕಿಮ್ಮನೆ ರತ್ನಾಕರ್‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News