ವಾದ್ರಾಗೆ ಸಂಬಂಧಿಸಿದ ಕಂಪೆನಿಗೆ ಇ.ಡಿ. ಹೊಸ ನೋಟಿಸ್

Update: 2016-07-01 18:37 GMT

ಹೊಸದಿಲ್ಲಿ, ಜೂ.1: ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿನ ಭೂ ವ್ಯವಹಾರವೊಂದರಲ್ಲಿ ಕಪ್ಪು ಹಣವನ್ನು ಬಿಳಿಯಾಗಿಸಲಾಗಿದೆಯೆಂಬ ಆರೋಪದ ಕುರಿತಾಗಿ ತನಿಖೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾಗೆ ಸಂಬಂಧಿಸಿದ ಸಂಸ್ಥೆಯೊಂದಕ್ಕೆ ಜಾರಿ ನಿರ್ದೇಶನಾಲಯವು (ಇಡಿ) ಹೊಸದಾಗಿ ನೋಟಿಸ್ ಕಳುಹಿಸಿದೆ. ಕಳೆದ ತಿಂಗಳು ಮೊದಲ ಬಾರಿ ಕಳುಹಿಸಿದ್ದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ವಕೀಲರನ್ನು ಕಳುಹಿಸಿದ್ದುದನ್ನು ಇ.ಡಿ. ಅನಧಿಕೃತವೆಂದು ತಳ್ಳಿ ಹಾಕಿತ್ತು. ಇದೀಗ ಸಂಸ್ಥೆಗೆ ಎರಡನೆಯ ಬಾರಿ ಸಮನ್ಸ್ ಕಳುಹಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾದ್ರಾಗೆ ಸಂಬಂಧಿಸಿರುವ ಮೇ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಗೆ, ಪ್ರಕರಣದ ತನಿಖಾಧಿಕಾರಿಗೆ ಅದರ ಆರ್ಥಿಕ ಹೇಳಿಕೆಗಳು ಹಾಗೂ ಇತರ ದಾಖಲೆಗಳನ್ನು ಒಪ್ಪಿಸಲು 2 ವಾರಗಳ ಸಮಯಾವಕಾಶ ನೀಡಲಾಗಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News