ಡಾ. ಝಾಕಿರ್ ನಾಯ್ಕ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್

Update: 2016-07-11 09:48 GMT

ಹೊಸದಿಲ್ಲಿ, ಜು.11: ಇಸ್ಲಾಮ್ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯ್ಕಾ ಬೆಂಬಲಕ್ಕೆ ನಿಂತಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಝಾಕಿರ್ ಅವರನ್ನು ಅನಾವಶ್ಯಕವಾಗಿ ವಿವಾದಕ್ಕೆಳೆಯಲಾಗುತ್ತಿದೆಯೆಂದು ಆರೋಪಿಸಿದೆ.

‘‘ಧಾರ್ಮಿಕ ಪ್ರವಚನಗಳನ್ನು ನೀಡುವಲ್ಲಿ ಹಾಗೂ ಆಧ್ಯಾತ್ಮಿಕ ಬರಹಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಝಾಕಿರ್ ಯಾವತ್ತೂ ಗುಟ್ಟಾಗಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರಲ್ಲ ಎಂದು ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಇ.ಟಿ. ಮುಹಮ್ಮದ್ ಬಶೀರ್ ಹೇಳಿದ್ದಾರೆ.

ಧಾರ್ಮಿಕ ಸಾಮರಸ್ಯಕ್ಕಾಗಿ ಶ್ರಮಿಸಿದ ಹಾಗೂ ಇಸ್ಲಾಂ ತತ್ವಗಳನ್ನು ಪ್ರಚುರ ಪಡಿಸಿದಂತಹ ವ್ಯಕ್ತಿಯೊಬ್ಬನನ್ನು ಹಿಂಸಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ವಿರುದ್ಧ ತನ್ನ ಕಠಿಣ ನಿಲುವನ್ನು ಝಾಕಿರ್ ವ್ಯಕ್ತಪಡಿಸುತ್ತಿರುವ ಹಾಗೂ ಸಂಘಟನೆಯನ್ನು ಆ್ಯಂಟಿ-ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ ಎಂದು ಬಣ್ಣಿಸುವ ವೀಡಿಯೊ ದೃಶ್ಯಾವಳಿಯನ್ನೂ ಬಶೀರ್ ಮಾಧ್ಯಮ ಮಂದಿಯ ಮುಂದೆ ಪ್ರಸ್ತುತ ಪಡಿಸಿದರು.

ಇಸ್ಲಾಮ್ ಧರ್ಮದ ನಿಜವಾದ ಅನುಯಾಯಿ ಯಾವತ್ತೂ ಮುಗ್ಧರನ್ನು ಕೊಲ್ಲುವುದಿಲ್ಲ ಎಂದೂ ಝಾಕಿರ್ ಆ ವೀಡಿಯೊದಲ್ಲಿ ಹೇಳಿದ್ದು ದಾಖಲಾಗಿದೆ.
ಧಾರ್ಮಿಕ ಉಗ್ರವಾದದ ವಿರುದ್ಧ ಹೋರಾಡಿದ ವ್ಯಕ್ತಿಯೊಬ್ಬರ ಮೇಲೆ ಯಾವುದೋ ಕಾರಣಕ್ಕೆ ಉಗ್ರವಾದಿ ಎಂಬ ಹಣೆ ಪಟ್ಟಿ ಹಚ್ಚಲಾಗುತ್ತಿದೆಯೆಂದೂ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News