ಎಲ್‌ಎಸ್‌ಡಿ ಕಾಯಿಲೆಗೆ ಚಿಕಿತ್ಸೆ ನೀಡಲು ಸರಕಾರಕೆ್ಕ ಹೆಕೋರ್ಟ್ ಸೂಚನೆ

Update: 2016-07-25 18:51 GMT

ಬೆಂಗಳೂರು, ಜು.25: ರಾಜ್ಯದಲ್ಲಿ ಲೈಸೋಮಲ್ ಸ್ಟೋರಾಗೆ ಡಿಸಾರ್ಡ್ಸ್ (ಔಟಟಞಚ್ಝ ಖಠಿಟ್ಟಜಛಿ ಈಜಿಟ್ಟಛ್ಟಿ)    ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲು ಚಿಕಿತ್ಸೆ ನೀಡಲು ಪ್ರಾರಂಭಿಸಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

 ಈ ಸಂಬಂಧ ಎಲ್‌ಎಸ್‌ಡಿ ಪರ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಸರಕಾರದ ಪರ ವಕೀಲರು ವಾದಿಸಿ, ಲೈಸೋಮಲ್ ಸ್ಟೋರಾಗೆ ಡಿಸಾರ್ಡ್ಸ್(ಎಲ್‌ಎಸ್‌ಡಿ) ರೋಗವು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಕೊಳ್ಳುತ್ತದೆ. ಈ ರೋಗವನ್ನು ಗುಣಪಡಿಸಲು 20 ಲಕ್ಷ ದಿಂದ 2 ಕೋಟಿ ರೂ.ವರೆಗೆ ವೆಚ್ಚವಾಗುತ್ತದೆ. ಇದರ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸಮನಾಗಿ ನೀಡಬೇಕಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

    ಅರ್ಜಿದಾರರ ಪರ ವಾದಿಸಿದ ವಕೀಲರು, ಕರ್ನಾಟಕ ರಾಜ್ಯದಲ್ಲಿ 40 ಮಕ್ಕಳಿಗೆ ಲೈಸೋಮಲ್ ಸ್ಟೋರಾಗೆ ಡಿಸಾರ್ಡ್ಸ್ ರೋಗ ಬಂದಿರುವುದನ್ನು ಪತ್ತೆ ಹಚ್ಚಲಾಗಿದ್ದು, ಸರಕಾರ ಈ ರೋಗದ ಗುಣಮುಖಕ್ಕೆ ಹಣ ನೀಡುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು, ರಾಜ್ಯದಲ್ಲಿ ಲೈಸೋಮಲ್ ಸ್ಟೋರಾಗೆ ಡಿಸಾರ್ಡ್ಸ್ ರೋಗದಿಂದ ನರಳುತ್ತಿರುವ ಮಕ್ಕಳಿಗೆ ರಾಜ್ಯ ಸರಕಾರ ಮೊದಲು ಚಿಕಿತ್ಸೆ ನೀಡಬೇಕು. ಆಮೇಲೆ ಹಣ ಹಂಚಿಕೆ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News