ಮಂಗಳೂರು: ಜು. 28ರಂದು ಎಚ್‌ಐಎಫ್ ವತಿಯಿಂದ ಹಜ್ ತರಬೇತಿ ಶಿಬಿರ
Update: 2016-07-27 20:16 IST
ಮಂಗಳೂರು, ಜು. 27: ನಗರದ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ವತಿಯಿಂದ ಜುಲೈ 28ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 2:30ರವರೆಗೆ ವಾಸ್‌ಲೇನ್‌ನ ಮಸ್ಜಿದುಲ್ ಎಹ್ಸಾನ್‌ನಲ್ಲಿ ಹಜ್ ತರಬೇತಿ ಶಿಬಿರ ನಡೆಯಲಿದೆ.
ವೌಲಾನಾ ಮುಫ್ತಿ ಅಬ್ದುಲ್ ಮನ್ನಾನ್ ಉರ್ದು ಭಾಷೆಯಲ್ಲಿ ಹಾಗೂ ವೌಲಾನಾ ಮುಸ್ತಫಾ ದಾರಿಮಿ ಬ್ಯಾರಿ ಭಾಷೆಯಲ್ಲಿ ಉಪನ್ಯಾಸ ನಡೆಯಲಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವಿದ್ದು, ಪ್ರಶ್ನೆಗಳನ್ನು ಕೇಳಬಹುದು. ಕನ್ನಡ, ಇಂಗ್ಲಿಷ್, ಉರ್ದು ಹಾಗೂ ಬ್ಯಾರಿ ಭಾಷೆಗಳಲ್ಲಿ ಮಹಿಳೆಯರಿಂದಲೇ ಉತ್ತರಿಸಲಾಗುವುದು.
ಶಿಬಿರದಲ್ಲಿ ಉಚಿತ ಹಜ್ ಗೈಡ್, ಮೆಡಿಸಿನ್ ಮತ್ತು ದುವಾ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.