ರಾಜಕೀಯಕ್ಕೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ

Update: 2016-08-22 08:48 GMT

ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಅವರು ಅಕಾಲಿಕವಾಗಿ ಮೃತರಾದ ಬಳಿಕ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಉದ್ಭವಿಸಿತ್ತು.

ಸಿದ್ದರಾಮಯ್ಯ  ಅವರು ಸಿಎಂ ಆದ ಬಳಿಕ ಮತ್ತು ಹಿಂದೆಯೂ ಅವರ ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಸಮಸ್ಯೆಗಳಿಗೆ ರಾಕೇಶ್ ಸ್ಪಂದಿಸುತ್ತಿದ್ದರು. ಅದರಿಂದಾಗಿ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು, ಅನುಯಾಯಿಗಳು ಇದ್ದರು. ಆದರೆ ಅವರ ಹಠಾತ್ ನಿಧನದಿಂದಾಗಿ ಸಿದ್ದರಾಮಯ್ಯ ಅವರ ರಾಜಕೀಯ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿತ್ತು.

ಇದರ ಬೆನ್ನಲ್ಲೇ ರಾಜಕೀಯವಾಗಿ ಎಂದೂ ಕಾಣಿಸಿಕೊಳ್ಳದ ಸಿಎಂ 2ನೆ ಪುತ್ರ ಡಾ. ಯತೀಂದ್ರ ಅವರು ರಾಜಕೀಯಕ್ಕೆ ಧುಮುಕುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ರಾಜ್ಯ ರಾಜಕಾರಣಕ್ಕೆ ಸಿಎಂ ಅವರ 2ನೆ ಪುತ್ರ ಎಂಟ್ರಿ ಕೊಡುತ್ತಿದ್ದಾರೆ.  ಈಗಾಗಲೇ ಸಿಎಂ ಅವರ ಕುಟುಂಬ ಯತೀಂದ್ರ ಅವರನ್ನು ಮನವೊಲಿಸಿದ್ದು, ಅವರ ಸಮ್ಮತಿಯೂ ದೊರೆತಿದೆ ಎಂದು ತಿಳಿದು ಬಂದಿದೆ.

ಬೆಂಬಲಿಗರ ಸೇವೆ ಮಾಡುವಂತೆ ಅವರಿಗೆ ಸಿಎಂ ಸಲಹೆ ನೀಡಿದ್ದು, ತಂದೆಯ ಮಾತಿಗೆ ಒಪ್ಪಿದ್ದಾರೆ ಎಂದು ಹೇಳಲಾಗಿದೆ. ಯತೀಂದ್ರ ಅವರು ಕಳೆದೆರಡು ದಿನಗಳಿಂದ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ರಾಕೇಶ್ ನಿರ್ವಹಿಸುತ್ತಿದ್ದ ಹೊಣೆ ಹೊರಲು ಯತೀಂದ್ರ ನಿರ್ಧಾರ ಕೈಗೊಂಡಿದ್ದು, ಭವಿಷ್ಯದಲ್ಲಿ ಬೆಂಬಲಿಗರ ಹಿತ ಕಾಯಲು ವರುಣಾ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನರನ್ನು ಭೇಟಿಯಾಗಿ, ಪರಿಚಯ ಮಾಡಿಕೊಂಡು ಸಿಎಂ ಆಪ್ತರು ಮತ್ತು ಬೆಂಬಲಿಗರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News