ಕನ್ಹಯ್ಯ, ಉಮರ್, ಅನಿರ್ಬನ್‌ ಜಾಮೀನು ಶರ್ತಗಳನ್ನು ಉಲ್ಲಂಸಿಲ್ಲ

Update: 2016-08-26 18:33 GMT

ಹೊಸದಿಲ್ಲಿ, ಆ.26: ಫೆಬ್ರವರಿಯ ಜವಾಹರಲಾಲ್ ನೆಹರೂ ವಿವಿ ಆವರಣದಲ್ಲಿ ಭಾರತ ವಿರೋ ಘೋಷಣೆಗಳನ್ನು ಕೂಗಿದ ಆರೋಪಗಳಿಗೆ ಸಂಬಂಸಿ ದೇಶದ್ರೋಹದ ಮೊಕದ್ದಮೆ ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಹಾಗೂ ಇನ್ನಿಬ್ಬರು ವಿದ್ಯಾರ್ಥಿಗಳು ತಮ್ಮ ಮಧ್ಯಾಂತರ ಜಾಮೀನಿನ ಶರ್ತಗಳನ್ನು ಉಲ್ಲಂಸಿಲ್ಲ ಹಾಗೂ ಪ್ರಕರಣದ ತನಿಖೆಗೆ ಸಹಕರಿಸಿದ್ದಾರೆಂದು ದಿಲ್ಲಿ ಪೊಲೀಸರು ಶುಕ್ರವಾರ ಸ್ಥಳೀಯ ನ್ಯಾಯಾಲಯವೊಂದರಲ್ಲಿ ತಿಳಿಸಿದ್ದಾರೆ.
ತಮಗೆ ನಿಯಮಿತವಾಗಿ ಜಾಮೀನು ನೀಡುವಂತೆ ಕೋರಿ ಈ ಮೂವರು ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ದಿಲ್ಲಿ ಪೊಲೀಸರ ವಿಶೇಷ ದಳವು ದಿಲ್ಲಿಯ ಹೆಚ್ಚುವರಿ ಸೆಶನ್ಸ್ ನ್ಯಾಯಾೀಶ ರಿತೇಶ್ ಸಿಂಗ್ ಅವರಿಗೆ ಈ ವಿವರಣೆಯನ್ನು ನೀಡಿದೆ.
 
ತಮಗೆ ನಿಯಮಿತ ಜಾಮೀನು ನೀಡಬೇಕೆಂದು ಕೋರಿ ಕನ್ಹಯ್ಯ ಕುಮಾರ್ ಆಗಸ್ಟ್ 17ರಂದು ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿ, ಈ ಬಗ್ಗೆ ಸೆಶನ್ಸ್ ನ್ಯಾಯಾಲಯದ ಮೆಟ್ಟಲೇರುವಂತೆ ತಿಳಿಸಿತು. ಮಾರ್ಚ್ 2ರಂದು ನ್ಯಾಯಾಲಯವು ಅವರಿಗೆ ಆರು ತಿಂಗಳುಗಳ ಕಾಲ ಮಧ್ಯಾಂತರ ಜಾಮೀನು ನೀಡಿದ್ದು, ಸೆಪ್ಟಂಬರ್ 1ರಂದು ಅದು ಅಂತ್ಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News