10 ಲಕ್ಷ ರೂಪಾಯಿಗೆ ಪ್ರತಿಷ್ಠಿತ ’ಅಮೆರಿಕನ್ ಜೀಪ್’!

Update: 2016-08-31 05:54 GMT

ನವದೆಹಲಿ, ಆ.31: ಅಮೆರಿಕದ ಖ್ಯಾತ ಆಟೊಮೊಬೈಲ್ ಬ್ರ್ಯಾಂಡ್- ಜೀಪ್‌ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡುರೂ.10 ಲಕ್ಷಬೆಲೆಯ ವಾಹನಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಯೋಚನೆ ಹೊಂದಿದ್ದು ಈ ವಾಹನಗಳು ಇತರ ಬ್ರ್ಯಾಂಡ್ ವಾಹನಗಳಾದ ಮಾರುತಿ ಸುಝುಕಿ ವಿಟಾರ ಬ್ರೆಝ, ಹೈಂಡೈ ಕ್ರೆಟ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಗೆ ಸ್ಪರ್ಧೆಯೊಡ್ಡಲಿವೆಯೆಂದು ಹೇಳಲಾಗುತ್ತಿದೆ. ಮಂಗಳವಾರದಂದು ‘ಜೀಪ್’ ಭಾರತೀಯ ಮಾರುಕಟ್ಟೆಗೆ ತನ್ನ 70 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಎಸ್ ಯು ವಿ ವಾಹನಗಳನ್ನು ಬಿಡುಗಡೆಗೊಳಿಸಿದೆ.

ಇಟಾಲಿಯನ್ ಅಮೆರಿಕನ್ ಆಗಿರುವ ಫಿಯೆಟ್ ಖ್ರೈಸ್ಲರ್ ಅವರ ಒಡೆತನದ ಜೀಪ್ ಬ್ರ್ಯಾಂಡ್ ಮೊದಲು ರ್ಯಾಂಗ್ಲರ್, ಗ್ರಾಂಡ್ ಚೆರೋಕೀ ಮುಂತಾದ ಲಕ್ಸುರಿವಾಹನಗಳನ್ನುಉತ್ಪಾದಿಸಿ ನಂತರ ಸ್ಥಳೀಯವಾಗಿ ನಿರ್ಮಾಣಗೊಳ್ಳುವ ಕಡಿಮೆ ವೆಚ್ಚದ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಯೋಚನೆಯಲ್ಲಿದೆ. ಮಂಗಳವಾರ ಬಿಡುಗಡೆಯಾದರ್ಯಾಂಗ್ಲರ್ ವಾಹನದ ಬೆಲೆ 71.59 ಲಕ್ಷ ರೂಪಾಯಿಯಾಗಿದ್ದರೆ ಗ್ರಾಂಡ್ ಚೆರೋಕೀ ಬೆಲೆ ರೂ.93 ಲಕ್ಷದಿಂದ 1.14 ಕೋಟಿ ಆಗಿದೆ.
ಆದರೆ ಕಡಿಮೆ ವೆಚ್ಚದ ಸಿ ವಿಭಾಗದ ಜೀಪ್ ಆಂತರಿಕವಾಗಿ 556 ಎಂದು ಕೋಡ್ ನೀಡಲಾದ ವಾಹನವು ಬರುವ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆೆಯಿದೆ. ಬಿಎಂ ಡಬ್ಲ್ಯೂ ಎಕ್ಸ್ 1 ಗೆ ಸ್ಪರ್ಧೆ ನೀಡಲಿರುವ ಈ ವಾಹನದ ಬೆಲೆ ರೂ.15 ರಿಂದ ರೂ.25 ಲಕ್ಷ ಆಗಿದ್ದರೆ ಆಂತರಿಕವಾಗಿ 526 ಕೋಡ್ ನೀಡಲಾಗಿರುವ ಜೀಪ್ ಎಸ್‌ಯುವಿಯ ಬೆಲೆಯನ್ನು ರೂ.10 ಲ್ಷಕ್ಕಿಂತ ಸ್ವಲ್ಪ ಹೆಚ್ಚಾಗುವುದಲ್ಲದೆ, ಅವು ವಿಟಾರ ಬ್ರೆಝಾ ಹಾಗೂ ಇಕೋ ಸ್ಪೋರ್ಟ್ ಗೆ ಸ್ಪರ್ಧೆ ನೀಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News