×
Ad

ಬ್ಯಾರಿ ಭಾಷಾ ಪ್ರಬಂಧ ಸ್ಪರ್ಧೆಗೆ ಆಹ್ವಾನ

Update: 2016-09-03 19:37 IST

ಮಂಗಳೂರು, ಸೆ.3:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಅ.3 ನ್ನು ‘ಬ್ಯಾರಿ ಭಾಷಾ ದಿನ’ವನ್ನಾಗಿ ಘೋಷಣೆ ಮಾಡಿದ್ದು , ಇದರ ಅಂಗವಾಗಿ ಸೆ. 26ರಿಂದ ‘ಬ್ಯಾರಿ ಭಾಷಾ ಸಪ್ತಾಹ’ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿದೆ.

 ಬ್ಯಾರಿ ಬಾಸೆರೊ ಬೆಲೆಚೆಲ್ ಎಙನೆ? (ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ?) ಎಂಬ ವಿಷಯದ ಬಗ್ಗೆ ವಿದ್ಯಾರ್ಥಿ ವಿಭಾಗಕ್ಕೆ (ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ) ಮತ್ತು ಸಾರ್ವಜನಿಕ ವಿಭಾಗಕ್ಕೆ ಬ್ಯಾರಿ ಭಾಷೆಯಲ್ಲಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

 ಪ್ರಬಂಧವು ಎ4 ಶೀಟ್‌ನಲ್ಲಿ ಕಂಪ್ಯೂಟರ್ ಪ್ರಿಂಟ್ ಮಾಡಿಸಿ ಕನಿಷ್ಠ 3 ಪುಟಗಳನ್ನು ಹೊಂದಿರಬೇಕು. ಆಸಕ್ತರು ದಿನಾಂಕ 22-09-2016ರ ಒಳಗೆ ಪ್ರಬಂಧ ಬರೆದು ಸಂಪೂರ್ಣ ವಿಳಾಸದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವುದು. ವಿಜೇತರಿಗೆ ಬ್ಯಾರಿ ಭಾಷಾ ದಿನಾಚರಣೆಯಂದು ಪ್ರಥಮ ರೂ.1,000/-, ದ್ವಿತೀಯ ರೂ.750/-, ತೃತೀಯ ರೂ.500/- ನಗದು ಬಹುಮಾನವನ್ನು ನೀಡಲಾಗುವುದು .

ಅಕಾಡೆಮಿ ವಿಳಾಸ : ಶ್ರೀ ಉಮರಬ್ಬ, ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಪ್ರಿಸಿಡಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್, ಅತ್ತಾವರ - ನಂದಿಗುಡ್ಡೆ ರಸ್ತೆ, ಮಂಗಳೂರು-575001, ಮೊಬೈಲ್ 9343563717, ದೂರವಾಣಿ : 0824-2412297, 4260038ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News