ಮಾಧವನ್

Update: 2016-09-26 18:50 GMT


ಕಾಸರಗೋಡು, ಸೆ.26: ಹಿರಿಯ ಸ್ವಾತಂತ್ರಹೋರಾಟಗಾರ, ಕಾಞಂಗಾಡ್ ನ ಕೆ. ಮಾಧವನ್ (102) ಅವರು ವಯೋಸಹಜ ಅಸೌಖ್ಯದಿಂದ ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
 
ಹನ್ನೆರಡನೆ ಹರೆಯದಲ್ಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು 1930ರಲ್ಲಿ ಕೆ. ಕೇಳಪ್ಪನ್ರ ನೇತೃತ್ವದಲ್ಲಿ ಕಲ್ಲಿಕೋಟೆಯಿಂದ ಪಯ್ಯನ್ನೂರಿಗೆ ನಡೆದ ಉಪ್ಪಿನ ಸತ್ಯಾಗ್ರಹ, 1931ರಲ್ಲಿ ನಡೆದ ಗುರುವಾಯೂರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.

ಕಾಸರಗೋಡಿನ ಗ್ರಾಮಗಳಲ್ಲಿ ಕೃಷಿಕ ಸಂಘ ರೂಪಿಸಲು ಹಾಗೂ ಕಮ್ಯೂನಿಸ್ಟ್ ಸಂಘಟನೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಹಲವಾರು ಬಾರಿ ಜೈಲುಶಿಕ್ಷೆ ಅನುಭವಿಸಿದ್ದರು.

‘ಒರು ಗಾಂಧೀಯನ್ ಕಮ್ಯೂನಿಸ್ಟಿಂಡೆ ಓರ್ಮಗಳ್’(ಪಯಸ್ವಿನಿಯುಡೆ ತೀರತ್ತ್) ‘ಒರು ಗ್ರಾಮತ್ತಿಂಡೆ ಹೃದಯತಿಲೂಡೆ’, ‘ಕಮ್ಯೂನಿಸ್ಟ್ ಸಮರನಾಯಕ’ ಎಂಬ ಕೃತಿಗಳನ್ನು ರಚಿಸಿದ್ದಾರೆ.ಕಾಂಗ್ರೆಸ್ನ ಕಾಸರಗೋಡು ತಾಲೂಕು ಸೆಕ್ರೆಟರಿ, ಕೆಪಿಸಿಸಿ ಸದಸ್ಯ, ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷ, ಕಮ್ಯೂನಿಸ್ಟ್ ಪಕ್ಷದ ಮೊದಲ ಕಾಸರಗೋಡು ತಾಲೂಕು ಸೆಕ್ರೆಟರಿಯಾಗಿಯೂ ಕಾರ್ಯಾಚರಿಸಿದ್ದಾರೆ. ಕಯ್ಯೆರು ಚಳವಳಿ ನಡೆಯುತ್ತಿದ್ದಾಗ ಕಮ್ಯೂನಿಸ್ಟ್ ಪಕ್ಷದ ಕಾಸರಗೋಡು ತಾಲೂಕು ಕಾರ್ಯ ದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ