ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿತ: ಮೂವರು ಸಾವು

Update: 2016-10-05 18:36 GMT

ಬೆಂಗಳೂರು, ಅ. 5: ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು, ಓರ್ವ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ದುರ್ಘಟನೆ ಇಲ್ಲಿನ ಬೆಳ್ಳಂದೂರು ಗೇಟ್ ಬಳಿ ನಡೆದಿದೆ.

ಬುಧವಾರ ನಗರದ ಬೆಳ್ಳಂದೂರು ಗೇಟ್ ಬಳಿ ಆಂಧ್ರ ಪ್ರದೇಶದ ಮೂಲದ ವಿನಯ್ ಕುಮಾರ್ ದೊಂಗಲು ಎಂಬವರ ನಿರ್ಮಾಣ ಹಂತದ ಕಟ್ಟಡ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಟ್ಟಡದ ಎರಡನೆ ಅಂತಸ್ತಿನಲ್ಲಿದ್ದ ಕೂಲಿ ಕಾರ್ಮಿಕ ಹಾಗೂ ಪಕ್ಕದ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಒಡಿಶಾ ಮೂಲದ ಅಶೋಕ್ ಕುಮಾರ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಕೂಲಿ ಕಾರ್ಮಿಕನ ಬಗ್ಗೆ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ಕಟ್ಟಡ ಕುಸಿತ

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಂಧ್ರಮೂಲದ ಕೂಲಿ ಕಾರ್ಮಿಕ ರಾಮ್‌ಬಾಬು(18) ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 ಘಟನೆ ಹಿನ್ನೆಲೆ: ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಏಕಾಏಕಿ ಐದು ಅಂತಸ್ತಿನ ಕಟ್ಟಡ ಅಲುಗಾಡಿದಂತೆ ಆಗಿದೆ. ಈ ವೇಳೆ ಕಟ್ಟಡದಲ್ಲಿದ್ದ ಕೂಲಿ ಕಾರ್ಮಿಕರು ಗಾಬರಿಗೊಂಡು ಹೊರ ಬಂದಿದ್ದಾರೆ. ಆದರೆ, ಒಂಬತ್ತು ಮಂದಿ ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದ ಕಾರಣ ಬೇಗ ಹೊರಬರಲು ಸಾಧ್ಯವಾಗಿಲ್ಲ. ಈ ವೇಳೆ ಕಟ್ಟಡ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪತ್ರಿಕೆಗೆ ತಿಳಿಸಿದರು.

 ಸುದ್ದಿ ತಿಳಿದ ಪೊಲೀಸರು, ಎಡಿಆರ್‌ಎಫ್ ಹಾಗೂ ಅಗ್ನಿ ಶಾಮಕ ದಳದ 50ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಎಂಟು ವರ್ಷದ ಬಾಲಕ ಸೇರಿ ಆರು ಮಂದಿಯನ್ನು ರಕ್ಷಣೆ ಮಾಡಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದರು.

ಊಟಕ್ಕೆ ಹೋಗುವಾಗ ಸಾವು: ಕುಸಿದ ಕಟ್ಟಡದ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಅಶೋಕ್ ಕುಮಾರ್ ಮಧ್ಯಾಹ್ನ 1 ಗಂಟೆಗೆ ಊಟ ಮಾಡುವ ಸಲುವಾಗಿ ಹೊರ ಬಂದಿದ್ದ. ಈ ವೇಳೆ ಕಟ್ಟಡ ಕುಸಿದು ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.

ಕಟ್ಟಡದೊಳಗೆ ಇನ್ನಿಬ್ಬರು?: ಕುಸಿದ ಐದು ಅಂತಸ್ತಿನ ಕಟ್ಟಡದಲ್ಲಿ ಇನ್ನೂ ಇಬ್ಬರು ಕೂಲಿ ಕಾರ್ಮಿಕರು ಇರುವ ಶಂಕೆ ವ್ಯಕ್ತವಾಗಿದ್ದು, ಬದುಕಿರುವುದು ಕಷ್ಟ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ರಾತ್ರಿಯೂ ಕಾರ್ಯಾಚರಣೆ: ಅಗ್ನಿಶಾಮಕ ದಳದ ಸಿಬ್ಬಂದಿ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ಆರಂಭಿಸಿದ್ದು, ತಡರಾತ್ರಿಯೂ ಕಟ್ಟಡದಲ್ಲಿರುವ ವ್ಯಕ್ತಿಗಳ ಶೋಧ ಕಾರ್ಯ ಮುಂದುವರಿಯಿತು. ಆದರೆ, ಭೂ-ಭಾಗದಲ್ಲೂ ಕೆಲವರು ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ ಹೇಳಿದ್ದಾರೆ.

 ಕಳಪೆ ಕಾಮಗಾರಿ: ಈ ಕಟ್ಟಡವು ವಿನಯ್ ಕುಮಾರ್ ದೊಂಗಲು ಎಂಬವರಿಗೆ ಸೇರಿದ್ದು, ಆರು ತಿಂಗಳ ಹಿಂದೆಯೇ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಆದರೆ, ನಿರ್ಮಾಣ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಗುರುತಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ 2016ನೆ ಮೇ ತಿಂಗಳಲ್ಲಿ ಬಿಬಿಎಂಪಿ ಆದೇಶಿಸಿದ್ದರೂ, ಮಾಲಕರು ನಿರ್ಮಾಣ ಕಾರ್ಯವನ್ನು ಮುಂದುವರಿಸಿದ್ದರು ಎಂದು ಪಾಲಿಕೆ ಅಧಿಕಾರಿ ಹೇಳಿದ್ದಾರೆ.

ಮಧ್ಯಾಹ್ನ ಊಟ ಮಾಡಿಕೊಂಡು ಕುಳಿತಿದ್ದೆ. ಏಕಾಏಕಿ ಕಟ್ಟಡ ಅಲುಗಾಡುತ್ತಿರುವ ಅನುಭವವಾಯಿತು. ಮಗುವನ್ನು ಎತ್ತಿಕೊಂಡು ಹೊರಗೆ ಬರುತ್ತಿದ್ದಂತೆ ಕಣ್ಣ ಮುಂದೆ ಇಡೀ ಕಟ್ಟಡ ಧರೆಗುರುಳಿತು.

-  ಮಲ್ಲಮ್ಮ, ಪ್ರತ್ಯಕ್ಷದರ್ಶಿ

ಬೆಂಗಳೂರು ಹೊರವಲಯದಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡು ಮೂಲದ ಖಾಸಗಿ ಬಿಲ್ಡರ್‌ಗಳು ಜಾಗವನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಕಟ್ಟಡಗಳನ್ನು ನಿರ್ಮಿಸುವುದು ಸಾಮಾನ್ಯವಾಗಿದೆ. ಬಿಬಿಎಂಪಿಯ ಸೂಚನೆಗೆ ಮಣೆ ಹಾಕದೆ ಕಳಪೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲೇ ಈ ರೀತಿಯ ಮೂರು ಪ್ರಕರಣಗಳು ನಡೆದಿವೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

- ಅರವಿಂದ ಲಿಂಬಾವಳಿ, ಸ್ಥಳೀಯ ಶಾಸಕ

5 ಲಕ್ಷ ರೂ. ಪರಿಹಾರ

ಕಟ್ಟಡ ಕುಸಿತದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಹಾಗೂ ಭದ್ರತಾ ಸಿಬ್ಬಂದಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡಿರುವ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂದು ರಾಜ್ಯ ಸರಕಾರ ಘೋಷಿಸಿದೆ.

ಮುಲಾಜಿಲ್ಲದೆ ಕ್ರಮ

ಕಳಪೆ ಕಾಮಗಾರಿಯಿಂದ ಈ ಕಟ್ಟಡ ಕುಸಿದಿದ್ದು, ಇದರ ಹಿಂದಿರುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಾಲಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ.

- ಜಿ.ಪದ್ಮಾವತಿ, ಪಾಲಿಕೆ ಮೇಯರ್

ಅಧಿಕಾರಿಗಳ ಅಮಾನತು

ಕಳಪೆ ಕಾಮಗಾರಿಯಿಂದಲೇ ಕಟ್ಟಡ ಕುಸಿದಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಮಹದೇವಪುರ ವಲಯದ ಎಇ ರಾಘವೇಂದ್ರ ಹಾಗೂ ಎಇಇ ಕೋದಂಡರೆಡ್ಡಿ ಅವರನ್ನು ಅಮಾನತುಗೊಳಿಸಿ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News