ಆರೋಗ್ಯ ಕಾಪಾಡಲು ಡಯಟ್ ಸೋಡಾ ಮಾತ್ರ ಕುಡಿಯುವವರು ಇದನ್ನೊಮ್ಮೆ ಓದಲೇಬೇಕು

Update: 2016-10-12 09:18 GMT

ವಾಷಿಂಗ್ಟನ್,ಅ.12 : ಆರೋಗ್ಯ ಕಾಪಾಡಲು ಡಯಟ್ ಸೋಡಾ ಸೇವಿಸುವವರು ಸಾಮಾನ್ಯ ಸೋಡಾ ಸೇವಿಸುವವರಂತೆಯೇ ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಾರೆಂದುಇತ್ತೀಚೆಗೆ ಬಿಡುಗಡೆ ಮಾಡಲಾದ ವರದಿಯೊಂದರಿಂದ ತಿಳಿದು ಬಂದಿದೆ.

ಪುರ್ಡುಯೆ ವಿಶ್ವವಿದ್ಯಾಲಯದಸಂಶೋಧಕರು ಕಳೆದ ಐದು ವರ್ಷಗಳಲ್ಲಿ ಈ ಬಗ್ಗೆ ಪ್ರಕಟವಾದ ಹಲವಾರು ಅಧ್ಯಯನಾ ವರದಿಗಳನ್ನು ಪರಿಶೀಲಿಸಿ ತಮ್ಮ ವರದಿಯನ್ನು ನೀಡಿದ್ದು ತಮ್ಮ ಸಂಶೋಧನೆಯ ಫಲಿತಾಂಶದಿಂದ ತಮಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆಟ್ರೆಂಡ್ಸ್ ಇನ್ ಎಂಡೊಕ್ರಿನಾಲಜಿ ಎಂಡ್ ಮೆಟಬಾಲಿಸಂ ನಲ್ಲಿಲೇಖನವೊಂದನ್ನು ಪ್ರಕಟಿಸಲಾಗಿದೆ.

‘‘ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಆರೋಗ್ಯದ ದೃಷ್ಟಿಯಿಂದ ಉತ್ತಮವೆಂದು ನಾನಂದುಕೊಂಡಿದ್ದು ಆದರೆ ಸಂಶೋಧನೆಯ ಫಲಿತಾಂಶ ಮಾತ್ರ ವಿಭಿನ್ನವಾಗಿದೆ’’ ಎಂದುಈ ಲೇಖನವನ್ನು ಪ್ರಕಟಿಸಿರುವ ಸುಸನ್ ಸ್ವಿಥರ್ಸ್ ಹೇಳಿದ್ದಾರೆ. ಈಕೆ ಮಾನಸಿಕ ವಿಜ್ಞಾನದ ಪ್ರೊಫೆಸರ್ ಕೂಡ ಆಗಿದ್ದಾರೆ.

ಡಯಟ್ ಸೋಡಾದಲ್ಲಿರುವ ಕೃತಕಸಕ್ಕರೆ ಸೋಡಾ ಸೇವಿಸುವವರಿಗೆ ಹೆಚ್ಚಿನ ಕ್ಯಾಲರಿ ನೀಡುವುದಿಲ್ಲವಾದರೂ ಅದೇ ಮುಂದೆ ಸಮಸ್ಯೆಗೆ ಕಾರಣವಾಗಬಹುದೆಂದು ಹೇಳಲಾಗಿದೆ. ಕೃತಕ ಸ್ವೀಟನರ್ ಗಳನ್ನು ಸೇವಿಸಿದಾಗ ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ದೇಹಕ್ಕೆ ಗೊಂದಲವಾಗುತ್ತದೆ. ಡಯಟ್ ಸೋಡಾ ಸೇವಿಸುವ ವ್ಯಕ್ತಿ ಇನ್ನೊಮ್ಮೆ ನಿಜವಾದ ಸಕ್ಕರೆ ಸೇವಿಸಿದಾಗ ದೇಹಕ್ಕೆ ಮತ್ತೆ ಗೊಂದಲವುಂಟಾಗುತ್ತದೆ. ಹೀಗೆ ದೇಹ ಇನ್ಸುಲಿನ್ ಬಿಡುಗಡೆ ಮಾಡದೆ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಗೊಳ್ಳುತ್ತದೆ. ಅಂತೆಯೇ ಕಾರ್ಬೋಹೈಡ್ರೇಟ್ ಸೇವಿಸದೇ ಇದ್ದರೂರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗಿ ವ್ಯಕ್ತಿ ಸಿಹಿಗಾಗಿ ಹಪಹಪಿಸುತ್ತಾನೆ’’ ಎಂದು ಫಿಟ್ ನೆಸ್ ತಜ್ಞೆ ಡಾ ಮೆಲಿನಾ ಜಂಪೊಲಿಸ್ ಹೇಳುತ್ತಾರೆ.

‘‘ಡಯಟ್ ಸೋಡಾನಮ್ಮ ಮೆದುಳಿನ ‘ರಿವಾರ್ಡ್ ಸೆಂಟರ್’ ಅನ್ನು ಕುಗ್ಗಿಸುವುದರಿಂದನಾವು ಇನ್ನೂ ಹೆಚ್ಚು ಕ್ಯಾಲರಿಯುಕ್ತ ಸಿಹಿ ಆಹಾರಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ’’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದರೆ ಈ ವರದಿ ಕೇವಲ ಒಬ್ಬರ ಅಭಿಪ್ರಾಯವೇ ಹೊರತು ವೈಜ್ಞಾನಿಕಅಧ್ಯಯನದಿಂದ ಮೂಡಿದ್ದಲ್ಲವೆಂದು ದಿ ಅಮೇರಿಕನ್ ಬೆವರೇಜ್ ಅಸೋಸಿಯೇಶನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News