ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಕಾಂಗ್ರೆಸ್ ಸರಕಾರ ಬಂದರೆ ಸಾಲ ಮನ್ನಾ:ಕ್ಯಾಪ್ಟನ್ ಅಮರೇಂದ್ರ ಸಿಂಗ್

Update: 2016-10-18 11:16 GMT

ಚಂಡೀಗಡ/ಫರೀದಾ ಕೋಟ್, ಅಕ್ಟೋಬರ್ 18: ಕಾಂಗ್ರೆಸ್ ಪಂಜಾಬ್ ಘಟಕ ಮುಖ್ಯಸ್ಥ ಕ್ಯಾಪ್ಟನ್ ಅಮರೇಂದ್ರ ಸಿಂಗ್, ಸಾಲದಿಂದ ಬಸವಳಿದ ರೈತರು ಆತ್ಮ ಹತ್ಯೆ ಮಾಡಿಕೊಳ್ಳಬಾರದೆಂದು ಕರೆ ನೀಡಿದ್ದಾರೆ. ಮೂರುತಿಂಗಳಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ನಿಮ್ಮೆಲ್ಲ ಸಾಲ ಮನ್ನಾ ಮಾಡಲಾಗುವುದು ಮಾತ್ರವಲ್ಲ ರೈತಕುಟುಂಬಕ್ಕೆ ಸರಕಾರಿ ನೌಕರಿ ನೀಡುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ರೈತರಿಗೆ ಹೇಳಿರುವುದಾಗಿ ವರದಿಯಾಗಿದೆ. ಕಾಂಗ್ರೆಸ್ ಭವನದಿಂದ ಆರಂಭಗೊಂಡ ರೋಡ್ ಶೋದ ವೇಳೆ ರೈತರಿಗೆ ಅವರು ಭರವಸೆ ನೀಡಿದ್ದು, ಪಂಜಾಬ್ ರಾಜಕೀಯದಲ್ಲಿ ಹೊಸರಾಜಕೀಯ ಚರ್ಚೆ ಹುಟ್ಟುಹಾಕಿರುವ ನವಜೋತ್ ಸಿಧು ಹೆಸರು ಪ್ರಸ್ತಾಪಿಸುತ್ತಿದ್ದಂತೆ ಸಿಡಿಮಿಡಿಗೊಂಡರೆಂದು ವರದಿ ತಿಳಿಸಿದೆ.

 "ಸಿಧು ಯಾವ ವಿಷಯ. ಅವರು ಈಗ ಯಾರಿಗೆ ಗೊತ್ತಿದ್ದಾರೆ. ಅವರು ಕ್ರಿಕೆಟ್ ಬಿಟ್ಟು ಯಾರು ಕೂಡಾ ನೆನಪಿಸಿಕೊಳ್ಳದಿರುವಷ್ಟು ಕಾಲವಾಗಿದೆ" ಎಂದು ನವ್‌ಜೋತ್ ಸಿಂಗ್ ಸಿಧು ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇವೇಳೆ ಯಾರಿಗೂ ನಿಶ್ಶರ್ತವಾಗಿ ಕಾಂಗ್ರೆಸ್ ಸೇರಲು ಮುಕ್ತ ಅವಕಾಶ ವಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಮೇಡಂ ನವಜೋತ್ ಸಿಂಗ್ ಸಿಧು( ಸಿಧು ಪತ್ನಿ ನವಜೋತ್ ಕೌರ್ ) ಕೂಡಾ ಈ ಬಾರಿ ಎಲ್ಲಿಂದ ಸ್ಪರ್ಧಿಸಿದರೂ ಸೋಲುಣ್ಣಲಿದ್ದಾರೆಂದು ಕ್ಯಾಪ್ಟನ್ ಅಮರೇಂದ್ರ ಸಿಂಗ್ ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News