ಮೆಡಿಟರೇನಿಯನ್ ಸಮುದ್ರದಲ್ಲಿ 2,400 ವಲಸಿಗರ ರಕ್ಷಣೆ: 14 ಮೃತದೇಹಗಳ ಪತ್ತೆ

Update: 2016-10-23 18:44 GMT

ಮಿಲಾನ್, ಅ. 23: ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿಯಲ್ಲಿ ವಲಸೆ ಬಂದಿರುವ 2,400 ಮಂದಿಯನ್ನು ಶನಿವಾರ ರಕ್ಷಿಸಲಾಗಿದೆ ಎಂದು ಇಟಲಿಯ ತಟರಕ್ಷಣಾ ಪಡೆ ಹೇಳಿದೆ. ಕಳೆದ ಎರಡು ದಿನಗಳಲ್ಲಿ 14 ಮೃತದೇಹಗಳನ್ನು ಸಮುದ್ರದಲ್ಲಿ ಪತ್ತೆಹಚ್ಚಲಾಗಿದೆ ಎಂದೂ ಅದು ತಿಳಿಸಿದೆ.

ವಲಸಿಗರು ರಬ್ಬರ್ ದೊಣಿಗಳು ಮತ್ತು ಇತರ ಸಣ್ಣ ದೋಣಿಗಳಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಶನಿವಾರ ಸುಮಾರು 20 ಬಾರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು ಹಾಗೂ ಕಾರ್ಯಾಚರಣೆಯಲ್ಲಿ ಐರಿಶ್ ನೌಕಾ ಹಡಗು ಮತ್ತು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹಾಗೂ ‘ಸೀ ವಾಚ್’ ಮುಂತಾದ ಮಾನವೀಯ ನೆರವು ಗುಂಪುಗಳು ಪಾಲ್ಗೊಂಡವು.

ರಕ್ಷಣಾ ಕಾರ್ಯಾಚರಣೆಗಳ ವೇಳೆ 12 ಮಂದಿ ಮೃತಪಟ್ಟಿದ್ದಾರೆ ಹಾಗೂ ಅವರ ಪೈಕಿ ನಾಲ್ವರು ಮಕ್ಕಳು ಎಂದು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಶನಿವಾರ ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ನೀಡಿದೆ.

ಉತ್ತರ ಆಫ್ರಿಕದಿಂದ ಯುರೋಪ್‌ಗೆ ಸಮುದ್ರ ಮಾರ್ಗವಾಗಿ ದೋಣಿಗಳಲ್ಲಿ ವಲಸೆ ಹೋಗುವಾಗ ಈ ವರ್ಷ 3,100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಅಥವಾ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News