ಇಬ್ಬರು ಆರೋಪಿಗಳ ಬಂಧನ

Update: 2016-10-25 16:57 GMT

 ಶಿವಮೊಗ್ಗ, ಅ.25: ಶಿವಮೊಗ್ಗ ನಗರದಲ್ಲಿ ಬೆಂಗಳೂರು ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಟೊ ಚಾಲಕರಾದ ಶಾರೂಖ್ (23)ಹಾಗೂ ತೋಷಿಕ್ (24)ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರನ್ನು ಸೋಮವಾರ ನಗರದಲ್ಲಿಯೇ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ ಆರಕ್ಕೇರಿದೆ. ಸೆಪ್ಟಂಬರ್ 7ರಂದು ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಆಗಮಿಸಿದ್ದ ಬಾಲಕಿಯನ್ನು, ಆರೋಪಿ ಶಾರೂಖ್ ಬಸ್‌ನಿಲ್ದಾಣಕ್ಕೆ ಬಿಡುವುದಾಗಿ ಹೇಳಿ ತನ್ನ ಆಟೊದಲ್ಲಿ ಕರೆದೊಯ್ದಿದ್ದ. ತದನಂತರ ತೋಷಿಕ್ ಹಾಗೂ ಅಮ್ಜದ್ ಎಂಬ ಮತ್ತಿಬ್ಬರು ಆಟೊ ಚಾಲಕರೊಂದಿಗೆ ಬಾಲಕಿಯನ್ನು ಸಕ್ರೆಬೈಲು ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ನಗರದ ಇಮಾಮ್‌ಬಾಡ ಬಡಾವಣೆಯಲ್ಲಿರುವ ಆರೋಪಿ ಅಮ್ಜದ್ ಮನೆಯಲ್ಲಿ ಬಾಲಕಿಯನ್ನು ಒಂದೂವರೆ ತಿಂಗಳ ಕಾಲ ಕೂಡಿ ಹಾಕಲಾಗಿತ್ತು. ಅ.20 ರಂದು ವಿಷಯ ತಿಳಿದ ಪೊಲೀಸರು ಮನೆಯಿಂದ ಬಾಲಕಿಯ ರಕ್ಷಣೆ ಮಾಡಿದ್ದರು. ನಾಲ್ವರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News