ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ

Update: 2016-10-25 16:59 GMT

ದುಷ್ಕೃತ್ಯ ನಡೆಸುವ ಆಟೊ ಚಾಲಕರ ಬಗ್ಗೆ  ಮಾಹಿತಿ ನೀಡಿ:  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ

ಶಿವಮೊಗ್ಗ, ಅ.25: ನಿಮ್ಮ ಸುತ್ತಮುತ್ತಲಿರುವ ಕೆಟ್ಟ ಚಾಳಿಯ ಆಟೊ ಚಾಲಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಅಂತಹವರ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರಗಿಸಿ, ಅಂತಹವರು ಆಟೊ ಓಡಿಸದಂತೆ ಎಚ್ಚರವಹಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಆಟೊ ಚಾಲಕರಿಗೆ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಬೆಂಗಳೂರು ಮೂಲದ ಬಾಲಕಿಯ ಮೇಲೆ ಆಟೊ ಚಾಲಕರು ನಡೆಸಿದ ಸಾಮೂಹಿಕ ಅತ್ಯಾ ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಡಿ.ಎ. ಆರ್. ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಏರ್ಪ ಡಿಸಿದ್ದ ಆಟೊ ಚಾಲಕ-ಮಾಲಕರ ಸಭೆೆಯಲ್ಲಿ ಅವರು ಮಾತನಾಡಿದರು. ಎಲ್ಲೆಡೆಯೂ ಕೆಟ್ಟವರು ಇರುತ್ತಾರೆ. ಆದರೆ ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲರನ್ನು ಕೆಟ್ಟವರೆಂದು ಗೂಬೆ ಕೂರಿಸುವ ಕೆಲಸ ನಡೆಯಬಾರದು. ಈ ಹಿನ್ನೆಲೆಯಲ್ಲಿ ನಿಮ್ಮ ನಡುವೆ ಇರುವ ಕೆಟ್ಟವರ ಬಗ್ಗೆ ಎಚ್ಚರಿಕೆ ಯಿಂದಿರಬೇಕು. ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು. ರಾತ್ರಿ ವೇಳೆ ಆಟೊ ಚಾಲನೆ ಮಾಡುವ ಬ್ಯಾಡ್ಜ್ ಹೊಂದಿರುವ ಚಾಲಕರಿಗೆ ಟೋಕನ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಚಾಲಕರ ಸಮಗ್ರ ಮಾಹಿತಿಯಿರುವ ಫೋಟೊ ಸಹಿತ ಮಾಹಿತಿಯನ್ನು ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳ ಲಾಗುವುದು. ಮೀಟರ್‌ನಲ್ಲಿ ದಾಖಲಾಗುವ ಮೊತ್ತವನ್ನು ಮಾತ್ರ ಪ್ರಯಾಣಿಕರಿಂದ ಪಡೆದುಕೊಳ್ಳಿ ಎಂದು ಸೂಚಿಸಿದರು.

ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆಯಿರುವ ಆಟೊ ನಿಲ್ದಾಣಗಳಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಆಟೊಗಳನ್ನು ನಿಲುಗಡೆ ಮಾಡುತ್ತಿರುವ ಬಗ್ಗೆ ತಾನೆೇ ಖುದ್ದಾಗಿ ಪರಿಶೀಲನೆ ನಡೆಸುತ್ತೇನೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪ್ರೀಪೈಡ್ ಆಟೊ ಕೌಂಟರ್ ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದು ಇದೇ ಸಂದಭರ್ದಲ್ಲಿ ಎಸ್ಪಿಯವರು ತಿಳಿಸಿದರು. ಸಂಚಾರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸಂತೋಷ್‌ಕುಮಾರ್ ಮಾತನಾಡಿ, ನಗರದ ಹಲವೆಡೆ ಆಟೊ ಚಾಲಕರು ಅನಧಿಕೃತವಾಗಿ ನಿಲುಗಡೆ ಮಾಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಚಾಲಕರಿಗೆ ಸೂಚನೆ ಕೂಡ ನೀಡಲಾಗಿದೆ. ಅಗತ್ಯವಿರುವ ಕಡೆ ನಿಲ್ದಾಣಗಳನ್ನು ಅಧಿಕೃತಗೊಳಿಸುವ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ತಂದರು.

ಅಹವಾಲು: ಇದೇ ವೇಳೆ ಆಟೊ ಚಾಲಕರು ತಮ್ಮ ಅಹವಾಲುಗಳನ್ನು ಜಿಲ್ಲಾ ರಕ್ಷಣಾಧಿಕಾರಿಗಳ ಮುಂದಿಟ್ಟರು. 17 ವರ್ಷಕ್ಕಿಂತ ಕಡಿಮೆ ವಯೋಮಾನದವರು ಆಟೊ ಓಡಿಸುತ್ತಾರೆ. ಅಪ್ರಾಪ್ತ ವಯಸ್ಸಿನವರಿಗೆ ಆಟೊ ಓಡಿಸಲು ಅವಕಾಶ ಕೊಡುವ ಆಟೊ ಮಾಲಕರ ವಿರುದ್ಧವೂ ಕ್ರಮ ಜರಗಿಸಬೇಕು ಎಂದು ಕೆಲ ಆಟೊ ಚಾಲಕರು ಸಭೆೆಯಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸಂಚಾರಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್‌ಗಳಾದ ಸಂತೋಷ್‌ಕುಮಾರ್, ರಾಂಕುಮಾರ್, ಶಿವಪ್ರಸಾದ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಯಾರೋ ಒಂದಿಬ್ಬರು ಚಾಲಕರು ಮಾಡುವ ದುಷ್ಕೃತ್ಯಗಳಿಂದ ನಾಗರಿಕರು ಇಡೀ ಆಟೊ ಚಾಲಕ ಸಮುದಾಯವನ್ನೇ ಅನುಮಾನದಿಂದ ನೋಡುವಂತಾಗಿದೆ. ಇನ್ನು ಮುಂದಾದರು ನಾವು ಪ್ರಯಾಣಿಕರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಬೇಕಾಗಿದೆ. ಈ ಮೂಲಕ ನಮ್ಮ ಬಗ್ಗೆ ನಾಗರಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವ ಕೆಲಸ ಮಾಡಬೇಕಾಗಿದೆ.

                 <ಯುವ ಆಟೊ ಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News