ಫಿಲಿಪ್ಪೀನ್ಸ್ ಜೊತೆಗಿರಲು ಬಯಸುತ್ತೇವೆ

Update: 2016-10-25 18:42 GMT

ಮನಿಲಾ, ಅ. 25: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿರುವ ಬಂಡುಕೋರ ಸಮಸ್ಯೆಯನ್ನು ಮಟ್ಟ ಹಾಕುವುದಕ್ಕಾಗಿ ಫಿಲಿಪ್ಪೀನ್ಸ್‌ನ ಜೊತೆಗಿರಲು ಅಮೆರಿಕ ಬಯಸುತ್ತದೆ ಎಂದು ಫಿಲಿಪ್ಪೀನ್ಸ್‌ಗೆ ಅಮೆರಿಕದ ರಾಯಭಾರಿ ಫಿಲಿಪ್ ಗೋಲ್ಡ್‌ಬರ್ಗ್ ಮಂಗಳವಾರ ಹೇಳಿದ್ದಾರೆ.

ಫಿಲಿಪ್ಪೀನ್ಸ್‌ನಿಂದ ಅಮೆರಿಕದ ಸೈನಿಕರನ್ನು ಒದ್ದು ಹೊರಹಾಕುವುದಾಗಿ ಆ ದೇಶದ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಹೇಳಿದ ಬಳಿಕ ಅಮೆರಿಕದ ರಾಯಭಾರಿ ಈ ಹೇಳಿಕೆ ನೀಡಿದ್ದಾರೆ.
ಬಂಡಾಯ ಪೀಡಿತ ಪ್ರದೇಶದಲ್ಲಿ ಭದ್ರತಾ ಬೆದರಿಕೆ ಗಂಭೀರವಾಗಿದೆ ಎಂದು ಹೇಳಿದ ಅವರು, ಈ ವಲಯದಲ್ಲಿ ಐಸಿಸ್ ನೆಲೆಯೂರಲು ಯತ್ನಿಸುತ್ತಿದೆ ಎಂದು ಎಬಿಎಸ್-ಸಿಬಿಎನ್ ಟೆಲಿವಿಶನ್‌ನೊಂದಿಗೆ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News