ನಕಲಿ ಎನ್‌ಕೌಂಟರ್‌ನಿಂದ ಮಾವೋವಾದಿಗಳ ಹತ್ಯೆ: ಐದು ರಾಜ್ಯಗಳಲ್ಲಿ ಪ್ರತಿಭಟನೆಯ ಘೋಷಣೆ

Update: 2016-11-01 07:46 GMT

ಹೈದರಾಬಾದ್, ನ. 1: ಆಂಧ್ರಪ್ರದೇಶ-ಒಡಿಶಾ ಗಡಿಯಲ್ಲಿ 34 ಮಾವೋವಾದಿಗಳನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಿ ಐದು ರಾಜ್ಯಗಳಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸಲು ಮಾವೋವಾದಿಗಳು ನಿರ್ಧರಿಸಿದ್ದಾರೆ. ಸಂಘಟನೆಯ ಕೇಂದ್ರ ಕಮಿಟಿ ಸದಸ್ಯ ಮತ್ತು ಕೇಂದ್ರವಕ್ತಾರ ಪ್ರತಾಪ್ ಈವಿಷಯವನ್ನು ಬಹಿರಂಗಪಡಿಸಿದ್ದಾರೆಂದು ವರದಿಯಾಗಿದೆ.ಪ್ರತಿಭಟನಾ ಕಾರ್ಯಕ್ರಮದ ಪ್ರಯುಕ್ತ ಒಡಿಶಾ ಮತ್ತು ಆಂಧ್ರಪ್ರದೇಶಗ, ತೆಲಂಗಾಣ, ಛತ್ತೀಸ್‌ಗಡ, ಮಹಾರಾಷ್ಟ್ರಗಳಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾವೋವಾದಿ ವಕ್ತಾರ ತಿಳಿಸಿದ್ದಾರೆ.

 ಪೊಲೀಸ್ ವಿಶೇಷ ರಹಸ್ಯ ಪಡೆಯನ್ನು ನಿಯೋಜಿಸಿ ಮಾವೋವಾದಿಗಳನ್ನು ಕೊಲ್ಲುವ ಯೋಜನೆಯನ್ನು ತಯಾರಿಸಲಾಗಿದೆ ಎಂದು ತೆಲಂಗಾಣ ಮಾವೋವಾದಿ ವಕ್ತಾರ ಜಗನ್ ಹೇಳಿದ್ದಾರೆ. ಈ ಘಟನೆಯ ಹಿಂದೆ ಒಡಿಶಾ, ಆಂದ್ರಪ್ರದೇಶ ಮುಖ್ಯಮಂತ್ರಿಗಳಾದ ನವೀನ್ ಪಟ್ನಾಯಕ್, ಚಂದ್ರಬಾಬುನಾಯ್ಡು ಕೈವಾಡವಿದೆ. ಇವರು ಶೀಘ್ರವೇ ಪ್ರತಿಹೊಡೆತವನ್ನು ನಿರೀಕ್ಷಿಸಬಹುದೆಂದು ಮಾವೋಯಿಸ್ಟ್ ಈಸ್ಟ್ ಡಿವಿಜನ್ ಕಮಿಟಿ ಕಾರ್ಯದರ್ಶಿ ಕೈಲಾಸ್ ಎಂಬಾತ ಬೆದರಿಕೆಯೊಡ್ಡಿದ್ದಾನೆ. ನವೆಂಬರ್ ಮೂರಕ್ಕೆ ತೆಲಂಗಾಣ ಬಂದ್‌ಗೆ ಮಾವೋವಾದಿಗಳು ಕರೆನೀಡಿದ್ದು. ಬಹಳ ಸುದೀರ್ಘ ಕಾಲದ ನಂತರ ಮಾವೋವಾದಿಗಳು ಇಂತಹ ಬಂದ್‌ಗೆ ಬಹಿರಂಗ ಕರೆನೀಡಿದ್ದಾರೆ ಎನ್ನಲಾಗಿದೆ. ಅಕ್ಟೋಬರ 24ರಂದು ಆಂದ್ರ ಒಡಿಶಾ ಗಡಿ ಚಿತ್ರಕೊಂಡ ಕಾಡಿನಲ್ಲಿ ವಿಶೇಷ ಕಮಾಂಡೊ ಪೋರ್ಸ್ ನೇತೃತ್ವದಲ್ಲಿ ದಾಳಿ ನಡೆಸಿ 34 ಮಾವೋವಾದಿಗಳ ಹತ್ಯೆ ನಡೆಸಲಾಗಿತ್ತು. ಆದರೆ ಕವಿ ವರವರ ರಾವ್ ಮುಂತಾದವರು ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿ ರಂಗಪ್ರವೇಶಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News