ಎಂಇಎಸ್ ಕರಾಳ ದಿನಾಚರಣೆ: ಕಲ್ಲು ತೂರಿದ ಪುಂಡರಿಗೆ ಲಾಠಿ ಬೀಸಿದ ಪೊಲೀಸರು

Update: 2016-11-01 13:31 GMT

ಬೆಳಗಾವಿ, ನ.1: ಎಂಇಎಸ್ ಕರಾಳ ದಿನಾಚರಣೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಕೆಲವು ಕಾರ್ಯಕರ್ತರು ಮೆರವಣಿಗೆ ಮಾರ್ಗದಲ್ಲಿ ಕನ್ನಡದ ಬಂಟಿಂಗ್ ಕಿತ್ತು ಪುಂಡಾಟ ನಡೆಸಿದ್ದಾರೆ.

    ಬೆಳಗಾವಿ ನಗರದ ಮರಾಠಾ ಮಂದಿರದ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಲ್ಲಿನ ರಿಲಾಯನ್ಸ್ ಮಳಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಘಟನೆ ವೇಳೆ ನೂಕುನುಗ್ಗಲು ಪರಿಸ್ಥಿತಿ ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರ ಲಾಠಿ ರುಚಿ ಕಂಡ ಪುಂಡರು ಚಲ್ಲಾಪಿಲ್ಲಿಯಾಗಿ ಓಡಿ ಹೋದರು.

ಇದಕ್ಕೂ ಮುನ್ನ ಬೆಳಗಾವಿಯಲ್ಲಿ ನಡೆದ ಕರಾಳ ದಿನಾಚರಣೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಸರೀತಾ ಪಾಟೀಲ್, ಉಪಮೇಯರ್ ಸಂಜಯ ಸಿಂಧೆ, ಶಾಸಕ ಸಂಭಾಜಿ ಪಾಟೀಲ್ ಸೇರಿದಂತೆ ಪಾಲಿಕೆಯ ಬಹುತೇಕ ಎಂಇಎಸ್ ಸದಸ್ಯರು ಭಾಗಿಯಾಗಿದ್ದರು.

ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಮೇಯರ್, ಉಪಮೇಯರ್ ನಾಡದ್ರೋಹವೆಸಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕರಾಳ ದಿನಾಚರಣೆಯಲ್ಲಿ ಪಾಲಿಕೆ ಮೇಯರ್, ಉಪಮೇಯರ್ ಭಾಗವಹಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News