ಮಿಶೆಲ್‌ಗೆ ಸಂಪುಟದಲ್ಲಿ ಸ್ಥಾನ ಕೊಡಬಲ್ಲೆ: ಹಿಲರಿ

Update: 2016-11-01 16:35 GMT

ವಾಶಿಂಗ್ಟನ್, ನ. 1: ನವೆಂಬರ್ 8ರ ಚುನಾವಣೆಯಲ್ಲಿ ತಾನು ವಿಜಯಿಯಾದರೆ, ಪ್ರಥಮ ಮಹಿಳೆ ಮಿಶೆಲ್ ಒಬಾಮರನ್ನು ತನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಕ್ತ ಮನಸ್ಸು ಹೊಂದಿದ್ದೇನೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

‘‘ಪ್ರಪಂಚದ ಎಲ್ಲೆಡೆ ಹೆಣ್ಣು ಮಕ್ಕಳ ಶಿಕ್ಷಣದಂಥ ಮಹತ್ವದ ವಿಷಯಗಳ ಬಗ್ಗೆ ತಾನು ಹೆಚ್ಚಿನ ಗಮನ ನೀಡಲು ಬಯಸಿರುವುದಾಗಿ ಅವರು (ಮಿಶೆಲ್) ನನಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ವಿನ್ಸ್‌ಟನ್-ಸಲೇಮ್‌ನಲ್ಲಿ ನಾವು ಜೊತೆಯಾಗಿರುವಾಗ ನಾವಿಬ್ಬರು ಈ ವಿಷಯದ ಬಗ್ಗೆ ಮಾತನಾಡಿದ್ದೇವೆ. ಅವರು ಮತ್ತೊಮ್ಮೆ ಸರಕಾರದಲ್ಲಿ ಭಾಗಿಯಾಗುವುದಾದರೆ ನಾನು ಅವರಿಗೆ ಉತ್ತಮ ಭಾಗೀದಾರೆಯಾಗಿರುತ್ತೇನೆ’’ ಎಂದು ‘ಎಕ್ಸ್‌ಟ್ರಾ ಟಿವಿ’ಗೆ ಹಿಲರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News