×
Ad

ಪಾಕಿಸ್ತಾನ | ಉಗ್ರರ ದಾಳಿಯಲ್ಲಿ 6 ಭದ್ರತಾ ಸಿಬ್ಬಂದಿ ಮೃತ್ಯು

Update: 2024-09-20 21:31 IST

PC : PTI 

ಇಸ್ಲಮಾಬಾದ್ : ವಾಯವ್ಯ ಪಾಕಿಸ್ತಾನದ ಭದ್ರತಾ ಠಾಣೆಯ ಮೇಲೆ ಗುರುವಾರ ತಡರಾತ್ರಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 6 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಠಾಣೆಯೊಳಗೆ ನುಗ್ಗುವ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಸೇನೆ ಶುಕ್ರವಾರ ಹೇಳಿದೆ.

ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಎರಡು ಪ್ರತ್ಯೇಕ ಘರ್ಷಣೆ ನಡೆದಿದ್ದು ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಹೊಣೆ ವಹಿಸಿಕೊಂಡಿದೆ. ದಕ್ಷಿಣ ವರ್ಜಿಸ್ತಾನದ ಬುಡಕಟ್ಟು ಜಿಲ್ಲೆಯಲ್ಲಿ ಭದ್ರತಾ ಠಾಣೆಗೆ ನುಗ್ಗಲು ಉಗ್ರರು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಆದರೆ ಗುಂಡಿನ ಚಕಮಕಿಯಲ್ಲಿ 6 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ. ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಉತ್ತರ ವರ್ಜಿಸ್ತಾನದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಸೇನೆಯ ಕಾರ್ಯಾಚರಣೆಯಲ್ಲಿ ಅಫ್ಘಾನಿಸ್ತಾನದಿಂದ ಪಾಕಿಸ್ತಾನ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ 7 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಪಡೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News