ಇಸ್ರೇಲ್ ದಾಳಿ | ಹಿಜ್ಬುಲ್ಲಾ ಕಮಾಂಡರ್ ಸಹಿತ 3 ಮಂದಿ ಮೃತ್ಯು
Update: 2024-09-20 21:29 IST
PC: aljazeera.com
ಬೈರೂತ್ : ಲೆಬನಾನ್‍ನ ಬೈರೂತ್‍ನಲ್ಲಿ ಇಸ್ರೇಲ್ `ಉದ್ದೇಶಿತ ಗುರಿಯ' ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ಉನ್ನತ ಕಮಾಂಡರ್ ಸೇರಿದಂತೆ ಕನಿಷ್ಟ 3 ಮಂದಿ ಸಾವನ್ನಪ್ಪಿದ್ದು ಇತರ 17 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್‍ನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
`ಹಿಜ್ಬುಲ್ಲಾದ ಭದ್ರಕೋಟೆ ದಕ್ಷಿಣ ಲೆಬನಾನ್‍ನಲ್ಲಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ರಾದ್ವಾನ್ ತುಕಡಿಯ ಕಮಾಂಡರ್ ಇಬ್ರಾಹಿಂ ಅಖಿಲ್ ಸೇರಿದಂತೆ ಕನಿಷ್ಟ 3 ಮಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್‍ನ ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ. ಬೈರೂತ್‍ನಲ್ಲಿ ಉದ್ದೇಶಿತ ಗುರಿಯ ಮೇಲೆ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಪ್ರಮುಖ ಸದಸ್ಯನ ಸಹಿತ ಮೂವರು ಹತರಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಇಸ್ರೇಲ್ ದಾಳಿ | ಹಿಜ್ಬುಲ್ಲಾ ಕಮಾಂಡರ್ ಸಹಿತ 3 ಮಂದಿ ಮೃತ್ಯು ದೃಢಪಡಿಸಿದೆ.