ಕೇರಳದ ವಿಜಿಲೆನ್ಸ್ ಅಧಿಕಾರಿ ಪತ್ನಿಗೆ ಕರ್ನಾಟಕ ಅರಣ್ಯ ಇಲಾಖೆಯಿಂದ ನೋಟಿಸ್

Update: 2016-11-03 07:46 GMT

ತಿರುವನಂತಪುರಂ, ನ. 3: ಕೇರಳದ ವಿಜಿಲೆನ್ಸ್ ಡೈರೆಕ್ಟರ್ ಡಾ. ಜೇಕಬ್ ಥಾಮಸ್‌ರ ಕುಟುಂಬದ ವಿರುದ್ಧ ಅರಣ್ಯಭೂಮಿ ಒತ್ತುವರಿ ಮಾಡಿರುವುದಕ್ಕಾಗಿ ಕರ್ನಾಟಕ ಸರಕಾರ ನೋಟಿಸು ನೀಡಿದೆ ಎಂದು ವರದಿಯಾಗಿದೆ. ಜೇಕಬ್ ಥಾಮಸ್ ಪತ್ನಿ ಡೈಸಿ ಜೇಕಬ್ ಕರ್ನಾಟಕದ ಕೊಡಗಿನಲ್ಲಿ 151.03 ಎಕರೆ ಮೀಸಲು ಅರಣ್ಯ ಜಮೀನು ಒತ್ತುವರಿ ಮಾಡಿದ್ದಾರೆಂದು,ಇದನ್ನು ತೆರವುಗೊಳಿಸಬೇಕೆಂದು ಮಡಿಕೇರಿ ಸಬ್ ಡಿವಿಷನ್ ಅಸಿಸ್ಟೆಂಟ್ ಫಾರೆಸ್ಟ್ ಕನ್ಸರ್ವೇಟರ್ ಜಿ. ರಂಗನಾಥನ್ ನೋಟಿಸು ಜಾರಿ ಮಾಡಿದ್ದಾರೆ.

ಅನಧಿಕೃತವಾಗಿ ಕೈವಶ ಇರಿಸಿರುವ ಜಮೀನು ಬಿಟ್ಟುಕೊಡಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆ ಕಳೆದ ಅಕ್ಟೋಬರ್ 27ಕ್ಕೆ ಅದೇಶಿಸಿತ್ತು. ಅರಣ್ಯಕಾನೂನು 64(ಎ) ಉಲ್ಲಂಘಿಸಲಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ. 1990ರಲ್ಲಿ ಕೊಡಗಿನ ಕೊಪ್ಪಾಡಿಯಲ್ಲಿ ಡೈಸಿಯವರ ಹೆದರಿನಲ್ಲಿ 151.03 ಎಕರ್ ಜಮೀನು 15 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ. ಈಗ ಈ ಜಮೀನು 18.12 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ.

ಕೇಂದ್ರ ಗೃಹಸಚಿವಾಲಯಕ್ಕೆ ಸಲ್ಲಿಸಿದ್ದ ಆಸ್ತಿವಿವರದಲ್ಲಿ ಜೇಕಬ್ ಈ ಜಮೀನಿನ ವಿವರವನ್ನು ನೀಡಿದ್ದಾರೆ. ಈ ಜಮೀನಿನಿಂದ ತನಗೆ ಪ್ರತಿವರ್ಷ 35ಲಕ್ಷರೂಪಾಯಿ ವರಮಾನವಿದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಜಮೀನನ್ನು ಕರ್ನಾಟಕ ಸರಕಾರ ಅರಣ್ಯ ಮೀಸಲು ಜಮೀನು ಎಂದು ಹೇಳುತ್ತಿದೆ. ಇದಕ್ಕೆ ಸಂಬಂಧಿಸಿ ಡೈಸಿ ಕರ್ನಾಟಕದ ವಿವಿಧ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News