ಶಿವಾಜಿ, ಪೃಥ್ವಿರಾಜ್ ಜಯಂತಿ ಆಚರಿಸುವುದೇಕೆ?

Update: 2016-11-06 18:44 GMT

ಮಾನ್ಯರೆ,
ಕರ್ನಾಟಕದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಮುಖರ್ಜಿಯವರು, ಕರ್ನಾಟಕ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಿಸುವ ಔಚಿತ್ಯವೇನು? ಟಿಪ್ಪುಎಂದೂ ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ವಲ್ಲಾ ಎಂದು ಸರಕಾರಕ್ಕೆ ಅವರು ಪ್ರಶ್ನಿಸಿದ್ದಾರೆ. ಹಾಗಾದರೆ ಮಹಾರಾಷ್ಟ್ರದಲ್ಲಿ ಪ್ರತೀ ವರ್ಷ ಎಪ್ರಿಲ್ ತಿಂಗಳಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ಶಿವಾಜಿ ಜಯಂತಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸರಕಾರದ ಪ್ರತಿಯೊಂದು ಇಲಾಖೆ ಹಾಗೂ ನಗರ ಪಾಲಿಕೆ ಮತ್ತು ಎಲ್ಲಾ ಸ್ತರದ ಪಂಚಾಯತ್‌ಗಳು ಕಡ್ಡಾಯವಾಗಿ ಶಿವಾಜಿ ಜಯಂತಿ ಆಚರಿಸಲೇ ಬೇಕು ಎಂದು ಮಹಾರಾಷ್ಟ್ರ ರಾಜ್ಯ ಸರಕಾರ ಆದೇಶಿಸುತ್ತದೆ. ಇದಕ್ಕೆಲ್ಲಾ ಕನಿಷ್ಠ ನೂರು ಕೋಟಿ ರೂಪಾಯಿ ಪ್ರತಿ ವರ್ಷ ಖರ್ಚಾಗುತ್ತದೆ. ಶಿವಾಜಿ ಜಯಂತಿಯಾದ ಅಕ್ಷಯ ತೃತೀಯ ದಿನ ಮೇ ತಿಂಗಳಲ್ಲಿ ಸರಕಾರಿ ರಜೆ ಇರುತ್ತದೆ. ಶಿವಾಜಿ ತನ್ನ ರಾಜ್ಯ ಉಳಿಸಿಕೊಳ್ಳಲು ಭಾರತದ ಇನ್ನೊಂದು ರಾಜ್ಯವಾದ ಮೊಘಲ ರಾಜ್ಯದೊಟ್ಟಿಗೆ ಕಾದಾಡಿದ್ದಾರೆೆ ಅಷ್ಟೇ. ಅದು ಬಿಟ್ಟು ಬೇರೆ ಏನಾದರೂ ಜನಪರ ಕೆಲಸ ಶಿವಾಜಿ ಮಾಡಿದ್ದಾರೆಯೇ?
ಅದೇ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಪೃಥ್ವಿರಾಜ್ ಚೌಹಾಣ್ ಜನ್ಮ ದಿನವನ್ನು ಸರಕಾರಿ ವೆಚ್ಚದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೃಥ್ವಿರಾಜ್ ಸಹಾ ಯಾವುದೇ ಜನಪರ ಕೆಲಸ ಮಾಡಿಲ್ಲ. ವಿದೇಶಿ ದಾಳಿಕೋರ ಮುಹಮ್ಮದ್ ಘೋರಿಯನ್ನು ಎದುರಿಸಿದ್ದು ಬಿಟ್ಟು ಬೇರೇನೂ ಮಹತ್ತರ ಕೆಲಸ ಪೃಥ್ವಿರಾಜ್ ಮಾಡಿಲ್ಲ. ಘೋರಿ ಭಾರತದ ಮೇಲೆ ದಾಳಿ ಮಾಡಿದ್ದು ಇಲ್ಲಿಯ ಹಿಂದೂಗಳನ್ನು ಮತಾಂತರ ಮಾಡಲು ಅಲ್ಲ. ಅವನ ಮೂಲ ಉದ್ದೇಶ ಇಲ್ಲಿಯ ಸಂಪತ್ತು ಲೂಟಿ ಹೊಡೆಯುವುದೇ ಆಗಿತ್ತು. ವಿರೋಧದ ಹೊರತಾಗಿಯೂ ಘೋರಿ ಭಾರತವನ್ನು ಲೂಟಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದ. ಹಾಗಾದರೆ ಪೃಥ್ವೀರಾಜನ ಜನ್ಮ ದಿನವನ್ನು ರಾಜಸ್ಥಾನ ಸರಕಾರ ಕೋಟ್ಯಂತರ ಖರ್ಚು ಮಾಡಿ ಆಚರಿಸುತ್ತಿರುವುದರ ಔಚಿತ್ಯವೇನು? ಇವೆಲ್ಲಾ ಐತಿಹಾಸಿಕ ಸತ್ಯಗಳು ನಮ್ಮ ಬೆಂಗಾಳಿ ನ್ಯಾಯಾಧೀಶ ಮುಖರ್ಜಿಯವರಿಗೆ ಗೊತ್ತಿದೆಯೇ?
 

Writer - -ಕ್ಷಿತಿಜ್ ಹೆಗಡೆ, ಮಂಗಳೂರು

contributor

Editor - -ಕ್ಷಿತಿಜ್ ಹೆಗಡೆ, ಮಂಗಳೂರು

contributor

Similar News