ರಾಜಕಾರಣಿಗಳ ನಡವಳಿಕೆಯಿಂದ ರಾಜ್ಯದಲ್ಲಿ ಅಶಾಂತಿ: ಕೃಷ್ಣಗೌಡ

Update: 2016-11-07 17:25 GMT

ಭಟ್ಕಳ, ನ.7: ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರ ಕನ್ನಡ ವಿರೋಧಿ ನಡೆ ಅನುಸರಿಸುತ್ತಿದ್ದು, ಇದರಿಂದ ರಾಜ್ಯದ ಜನತೆಗೆ ಬೇಸರವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣಗೌಡ ಹೇಳಿದರು. ಅವರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

  ಅಧಿಕಾರಿ ವರ್ಗದಲ್ಲಿ ಬಡವರ, ದಿನ ದಲಿತರ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಸಧ್ಯ ಕರ್ನಾಟ ಕದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಕೆಲವು ನಡೆಗಳಿಂದ ರಾಜ್ಯ ಅಧೋಗತಿಗೆ ಬರುತ್ತಿದೆ. ಈ ಸರಕಾರದ ಅವಧಿಯಲ್ಲಿ ಹೆಚ್ಚಾಗಿ ಪೊಲೀಸರ ಆತ್ಮಹತ್ಯೆ, ರೈತರ ಆತ್ಮಹತ್ಯೆ, ಕಾವೇರಿ, ಮಹಾದಾಯಿ ಹೋರಾಟ ಸೇರಿದಂತೆ ಇನ್ನು ಅನೇಕ ಸಂಕಷ್ಟಗಳನ್ನು ಸಿದ್ದರಾಮಯ್ಯ ಸರಕಾರ ಎದುರಿಸುತ್ತಿದೆ ಎಂದರು.

ಸಿದ್ದರಾಮಯ್ಯನವರು ತಮ ್ಮಕುರ್ಚಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.ಅದೇ ರೀತಿ ಸರಕಾರವನ್ನು ಎಚ್ಚರಿಸಬೇಕಾದ ವಿರೋಧ ಪಕ್ಷ ಬಿಜೆಪಿಯಲ್ಲಂತು ಮುಂದಿನ ಸರಕಾರ ರಚನೆಯ ಬಗ್ಗೆ ಕಸರತ್ತು ನಡೆಯುತ್ತಿದೆ. ಎಲ್ಲದಕ್ಕೂ ದಾಖಲೆಗಳ ಜೊತೆಗೆ ಮಾತನಾಡುವ ಕುಮಾರಸ್ವಾಮಿ, ತಮ್ಮ ಮಗನನ್ನು ಚಿತ್ರರಂಗದಲ್ಲಿ ಬೆಳೆಸುವಲ್ಲಿ ಮಗ್ನರಾಗಿದ್ದಾರೆ. ಕೆಲವೊಂದು ಕಡೆ ಕನ್ನಡರಾಜ್ಯೋತ್ಸವ ಸಂದಭರ್ದಲ್ಲಿ ಕನ್ನಡ ಪರಕಾರ್ಯಕ್ರಮಕ್ಕಿಂತ ಕನ್ನಡ ವಿರೋಧಿ ಕಾರ್ಯಕ್ರಮಗಳು ನಡೆದಿವೆ. ಅದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಕನ್ನಡ ವಿರೋಧಿ ನಡೆ ಸಾಕ್ಷಿಯಾಗಿದೆ ಎಂದು ಹೇಳಿದರು.
  ಇನ್ನು ಭಟ್ಕಳದಲ್ಲಿ ಕನ್ನಡ ಪರ ಸಂಘಟನೆಗಳೂ ಹಲವಾರು ಇವೆ. ಆದರೆ, ಯಾವುದೇ ಸಂಘಟನೆಗಳು ಈ ರೀತಿಯ ಕಾರ್ಯದಲ್ಲಿ ತೊಡಗಿಲ್ಲ ಕೇವಲ ಹೆಸರಿಗೆ ಸಂಘವನ್ನು ಕಟ್ಟಬಾರದು, ಸಂಘದಿಂದ ಉದ್ದೇಶವೂ ಸರಿಯಾಗಿದ್ದರೆ ಸಮಾಜವನ್ನು ಸರಿಪಡಿಸಲು ಸಾಧ್ಯವಾಗುತ್ತದೆ.ಎಂದರು.
 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಜಿಲ್ಲಾಧ್ಯಕ್ಷೆ ಶೋಭಾಆರ್.ನಾಯ್ಕ ಕನ್ನಡ ನಾಡು ಎಂದರೆ ಅದು ಕೇವಲ ಯಾವುದೇ ಜಾತಿಗೆ ಸಂಬಂಧಿಸಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ನಾಡು, ನುಡಿ, ಭಾಷೆಯ ಏಳಿಗೆಗಾಗಿ ಹೋರಾಟ ಮಾಡಬೇಕು.
ಜಾತಿ-ಧರ್ಮವನ್ನು ಕನ್ನಡ ನಾಡು,ನುಡಿ, ಜಲ ವಿಚಾರಕ್ಕೆ ಬಂದಾಗ ಮನೆಯಲ್ಲಿಯೇಇಟ್ಟುಒಗ್ಗಟ್ಟಿನಿಂದ ಹೋರಾಟಕ್ಕಿಳಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಈ ನಡುವೆ ಇದೇ ನಮ್ಮ ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಇಲ್ಲಿನ ಎಲ್ಲಾ ಸೌಲಭ್ಯವನ್ನು ಪಡೆದುಕೊಂಡು ಕೊನೆಗೆ ಬೇರೆ ಭಾಷೆ ಸಂಸ್ಕೃತಿಯನ್ನು ಹೊಗಳುವ ಮನಸ್ಥಿತಿಯ ಜನರು ನಮ್ಮಲ್ಲಿ ಇದ್ದಾರೆ.
  ಅಂತಹ ಮನಸ್ಥಿತಿಯ ಜನರನ್ನು ಹೇಗೆ ಎದುರಿಸಬೇಕು ಹಾಗೂ ಕಡೆಗಣಿಸಬೇಕು ಎಂಬ ಬಗ್ಗೆ ನಮ್ಮ ಸಂಘಟನೆಯಲ್ಲಿ ಈಗಾಗಲೇ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಇದಕ್ಕೂ ಸೂಕ್ತ ಉದಾಹರಣೆ ಸದ್ಯ ಮಹಾರಾಷ್ಟ್ರದಲ್ಲಿ ನಡೆದ ಘಟನೆಯಾಗಿದೆ. ಇಂತಹ ಸ್ಥಿತಿಯಲ್ಲಿ ಕನ್ನಡಿಗರಾದ ನಾವುಗಳು ಎಚ್ಚೆತ್ತುಕೊಳ್ಳಬೇಕಾದ ಸಂದಭರ್ ಎದುರಾಗಿದೆ.ಎಂದರು.
 
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ತಾಲೂಕು ಜೆಡಿಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಭಟ್ಕಳ ಎಂದರೆ ಕೆಲವು ಕೆಟ್ಟ ಚಿತ್ರಣಗಳೇ ನೆನಪಾಗುತ್ತವೆ.ಇದರಿಂದ ಭಟ್ಕಳದಲ್ಲಿನ ಸೊಬಗು ಜನರಿಗೆ ತಿಳಿಯುತ್ತಿಲ್ಲ. ಈ ರೀತಿ ನಕಾರಾತ್ಮಕ ಅಂಶ ಬದಲಾಗಬೇಕಾದರೆ ಅದು ಕನ್ನಡ ಭಾಷೆ ಸಂಸ್ಕೃತಿಯಿಂದ ಮಾತ್ರ ಸಾಧ್ಯ.ಇನ್ನು ಮುಂದೆ ಭಟ್ಕಳದಲ್ಲಿನ ಎಲ್ಲಾ ಆಟೊ ರಿಕ್ಷಾಚಾಲಕರು ಸೇರಿದಂತೆ ವ್ಯಾಪಾರಸ್ಥರು ನಮ್ಮ ಮುಸ್ಲಿಮರ ಬಳಿ ಕನ್ನಡದಲ್ಲಿಯೇ ಮಾತನಾಡಲು ಪ್ರಾರಂಭಿಸಿದರೆ ನಮಗೂ ಕನ್ನಡ ಕಲಿಯಲು ಸಾಧ್ಯ. ಮುಸ್ಲಿಮರ ಜೊತೆಗೆ ಹಿಂದಿಯಲ್ಲಿಅಥವಾ ನವಾಯತಿಯಲ್ಲಿ ಮಾತನಾಡುವ ಬದಲು ಕನ್ನಡದಲ್ಲಿ ಮಾತನಾಡಿದರೆ ಭಟ್ಕಳದಲ್ಲಿ ವ್ಯವಹಾರ ಭಾಷೆ ಕನ್ನಡವಾಗುತ್ತದೆ. ಒಂದು ಸಂಘಟನೆ ಯಾವತ್ತು ರಾಜಕೀಯ ರಂಗದಿಂದ ಹೊರಗಿದ್ದರೆ ಸಾಮಾನ್ಯಜನರಿಗೆ ಸಹಾಯವಾಗುತ್ತದೆ.ಸಂಘಟನೆಯ ಶಕ್ತಿಯ ಬಲ ಈಗಿನ ರಾಜಕಾರಣಿಗಳ ಗಮನಕ್ಕೆ ಬರಬೇಕು. ಕನ್ನಡ ಭಾಷೆಯನು ್ನಕಲಿತು ಇಷ್ಟೆಲ್ಲಾ ಮಾತನಾಡುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದರು.
 
  ವೇದಿಕೆಯಲ್ಲಿ ಕರವೇ ಸ್ವಾಭಿಮಾನಿ ಬಣದ ಬೆಂಗಳೂರು ನಗರಾಧ್ಯಕ್ಷ ಗೋಪಾಲ ಗೌಡ, ಮಾಜಿ ಶಾಸಕ ಜೆ.ಡಿ.ನಾಯ್ಕ, ಭಟ್ಕಳ ಬಿಜೆಪಿ ತಾಲೂಕಾಧ್ಯಕ್ಷರಾಜೇಶ ನಾಯ್ಕ, ಕಸಾಪ ತಾಲುಕಾಧ್ಯಕ್ಷ ಗಂಗಾಧರ ನಾಯ್ಕ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಎಚ್.ಆರ್. ಗಣೇಶ, ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ನರಸಿಂಹಮೂರ್ತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News