ಜಪಾನ್‌ನಲ್ಲಿ ಮತ್ತೆ ಭೂಕಂಪ; ಸುನಾಮಿಯಿಲ್ಲ

Update: 2016-11-24 16:31 GMT

ಟೋಕಿಯೊ, ನ. 24: ಈಶಾನ್ಯ ಜಪಾನ್‌ನಲ್ಲಿ ಗುರುವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 5.6ರ ತೀವ್ರತೆ ಹೊಂದಿದ್ದ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ಹೇಳಿದೆ.

ಫುಕುಶಿಮ ಅಣು ವಿದ್ಯುತ್ ಸ್ಥಾವರದ ಸಮೀಪ ಸಣ್ಣ ಪ್ರಮಾಣದ ಸುನಾಮಿಗೆ ಕಾರಣವಾದ ಪ್ರಬಲ ಭೂಕಂಪ ನಡೆದ ಎರಡು ದಿನಗಳ ಬಳಿಕ ಹೊಸದಾಗಿ ಭೂಕಂಪ ಸಂಭವಿಸಿದೆ.

ಗುರುವಾರ ಸಂಭವಿಸಿದ ಭೂಕಂಪವು ಸುನಾಮಿ ಅಲೆಗಳನ್ನು ಸೃಷ್ಟಿಸಿಲ್ಲ ಹಾಗೂ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟೋಕಿಯೊದಿಂದ ಈಶಾನ್ಯಕ್ಕೆ ಸುಮಾರು 210 ಕಿಲೋಮೀಟರ್ ದೂರದಲ್ಲಿ ಫುಕುಶಿಮ ರಾಜ್ಯದ ಕರಾವಳಿಯಲ್ಲಿ ಬೆಳಗ್ಗೆ 6:23ಕ್ಕೆ ಭೂಕಂಪ ಸಂಭವಿಸಿದೆ.

ಮಂಗಳವಾರ ಸಂಭವಿಸಿದ 6.9ರ ತೀವ್ರತೆಯ ಭೂಕಂಪ ಒಂದು ಮೀಟರ್ ಎತ್ತರದ ಅಲೆಗಳನ್ನು ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News