ಶಿವರಾಮ ಗೌಡ ನಿಧನ

Update: 2016-11-25 18:42 GMT

ಉಡುಪಿ, ನ.25: ಯಕ್ಷಗಾನ ಚಂಡೆವಾದಕ, ಸೌಕೂರು ಮೇಳದ ಕಲಾವಿದ ಶಿವರಾಮ ಗೌಡ (55) ಕೆಸರಕೊಪ್ಪಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು.

ಕಳೆದ ಎರಡು ದಶಕಗಳಿಂದ ಗೋಳಿಗರಡಿ, ಕಳವಾಡಿ, ಗುಂಡುಬಾಳ, ಬಗ್ವಾಡಿ ಮೇಳಗಳಲ್ಲಿ ಹಿಮ್ಮೇಳವಾದಕರಾಗಿ ಸೇವೆ ಸಲ್ಲಿಸಿದ್ದರು. ಶಿವರಾಮ ಗೌಡರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾವಿದರ ಕ್ಷೇಮ ಚಿಂತನೆಗೆ ದುಡಿಯುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ