ಪ್ರಾಮಾಣಿಕ ಪೊಲೀಸರ ಸ್ಥೈರ್ಯ ಕೆಡಿಸುವುದಿಲ್ಲ: ಪಿಣರಾಯಿ

Update: 2016-12-01 06:32 GMT

ತಿರುವನಂತಪುರಂ, ಡಿಸೆಂಬರ್ 1: ಪ್ರಮಾಣಿಕವಾಗಿ ಕೆಲಸಮಾಡುವ ಪೊಲೀಸರ ಮನೋಸ್ಥೈರ್ಯ ಕೆಡಿಸುವ ಕ್ರಮಗಳಿಗೆಮುಂದಾಗುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ. ಅಂತಹ ಘಟನೆಗಳು ಎಲ್ಲಿ ನಡೆದರೂ ಸರಕಾರ ಆಲಿಸುವುದಿಲ್ಲ ಎಂದುಅವರು ಹೇಳಿದ್ದಾರೆ.

ನಿಲಂಬೂರ್ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಪೊಲೀಸರು ನಡೆಸಿದ ಎನ್‌ಕೌಂಟರ್‌ನ್ನು ಆಡಳಿತಾರೂಢ ಎಲ್‌ಡಿಎಫ್‌ನ ಸದಸ್ಯ ಪಕ್ಷಗಳು ಮತ್ತು ಮಾಜಿ ಮುಖ್ಯಮಂತ್ರಿ ಕಮ್ಯುನಿಸ್ಟ್ ಹಿರಿಯ ನಾಯಕ ವಿಎಸ್ ಅಚ್ಯುತಾನಂದನ್‌ರು ಟೀಕಿಸಿ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೊಲೀಸರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಥಾರ್ಡ್ ಡಿಗ್ರಿ ಪ್ರಯೋಗಿಸಬಾರದು. ಇನ್ನುಮೇಲೆ ಲಾಕಪ್ ದೌರ್ಜನ್ಯ ನಡೆದರೆ ಠಾಣೆಯ ಜವಾಬ್ದಾರಿ ಹೊತ್ತಿರುವ ಎಸ್ಸೈಯನ್ನು ಅಮಾನತು ನಡೆಸಲಾಗುವುದು. ಲಾಕಪ್ ಡೆತ್ ಆದರೆ ಸರ್ಕಲ್ ಇನ್ಸ್‌ಪೆಕ್ಟರ್‌ಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಹೆಚ್ಚಿನ ಪೊಲೀಸರು ಅರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಾರೆ.ಪಕ್ಷಪಾತವಾದಿಯಾದ ಕೆಲವು ಅನುಭವಗಳಾಗುವಾಗುವ ಅದರ ವಿರುದ್ಧ ಟೀಕೆ ಕೇಳಿ ಬರುವುದು ಸಹಜ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರು ಕಯಕೂಟ್ಟದಲ್ಲಿ ನಡೆದ ಕೇರಳ ಪೊಲೀಸ್ ಅಸೋಸಿಯೇಶನ್ ಸ್ಪೆಶಲ್ ಕನ್ವೆನ್ಶನ್‌ನಲ್ಲಿ ಮಾತಾಡುತ್ತಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News