ಎಲ್ ಪಿ ಜಿ 2 ರೂ. ತುಟ್ಟಿ

Update: 2016-12-01 13:28 GMT

ಹೊಸದಿಲ್ಲಿ, ಡಿ.1: ವಿಮಾನ ಇಂಧನದ ಬೆಲೆಯನ್ನು ಇಂದು. ಶೇ.3.7ರಷ್ಟು ಇಳಿಸಲಾಗಿದ್ದು, ಸಬ್ಸಿಡಿ ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್‌ಗೆ ರೂ. 2.07ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಅಡುಗೆ ಅನಿಲದ ಬೆಲೆ 6 ತಿಂಗಳಲ್ಲಿ 7ನೆ ಬಾರಿ ಏರಿದಂತಾಗಿದೆ.

ದಿಲ್ಲಿಯಲ್ಲಿ ವಿಮಾನ ಇಂಧನದ ಬೆಲೆ ಕಿಲೊ ಲೋಟರ್‌ಗೆ ರೂ. 1,881 ಅಥವಾ ಶೇ. 3.7ರಷ್ಟು ಇಳಿಕೆಯಾಗಿದ್ದು, ರೂ. 48,379.63ಕ್ಕೆ ತಲುಪಿದೆ.

ಸಬ್ಸಿಡಿ ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ ರೂ. 430.64 ಇದ್ದುದು ಈಗ ರೂ. 432.71ಕ್ಕೆ ಏರಿಕೆಯಾಗಿದೆ (14.2 ಕಿ.ಗ್ರಾಂ ಸಿಲಿಂಡರ್‌ಗೆ).
ಮುಂಬೈಯಲ್ಲಿ ಸೀಮೆಎಣ್ಣೆಯ ಬೆಲೆ ಲೀಟರ್‌ಗೆ ರೂ. 17.51 ಆಗಿದೆ.

ಸಬ್ಸಿಡಿ ಹೊರತಾದ ಅಡುಗೆ ಅನಿಲದ ಜಾಡಿ ರೂ. 54.50ರಷ್ಟು ತುಟ್ಟಿಯಾಗಿದ್ದು, ರೂ. 584ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News