×
Ad

ಯುಟ್ಯೂಬರ್ ಸಾವುಕ್ಕು ಶಂಕರ್ ಬಂಧನ; ಆರೋಪಿಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನ ಅಪಘಾತ

Update: 2024-05-04 16:56 IST

PC : hindustantimes.com

ಕೊಯಮತ್ತೂರು: ಯುಟ್ಯೂಬರ್ ಎ.ಶಂಕರ್ ಅಲಿಯಾಸ್ ಸಾವುಕ್ಕು ಶಂಕರ್ ಎಂಬಾತನ್ನು ಶನಿವಾರ ಮುಂಜಾನೆ ಪೊಲೀಸರು ಥೇಣಿಯಲ್ಲಿ ಬಂಧಿಸಿದ್ದಾರೆ.

ತಮಿಳುನಾಡಿನ ಪೊಲೀಸ್ ಸಿಬ್ಬಂದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಸಾವುಕ್ಕುನನ್ನು ಬಂಧಿಸಿದ್ದಾರೆ. ಕೊಯಮತ್ತೂರು ನಗರ ಪೊಲೀಸ್ ವಿಭಾಗದ ಅಪರಾಧ ಶಾಖೆಯ ಸಬ್ ಇನ್‍ಸ್ಪೆಕ್ಟಟರ್ ಸುಕನ್ಯಾ ನೀಡಿದ ದೂರಿನ ಮೇರೆಗೆ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 294(ಬಿ), 509 ಮತ್ತು 353 ಅನ್ವಯ ಹಾಗೂ ತಮಿಳುನಾಡು ಮಹಿಳಾ ಕಿರುಕುಳ ಕಾಯ್ದೆಯ ಸೆಕ್ಷನ್ 4 ಅನ್ವಯ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ- 2000 ಸೆಕ್ಷನ್ 67ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News