ಬಾಬು (ಬಾಬಣ್ಣ)

Update: 2016-12-01 17:26 GMT

ಮೂಡುಬಿದಿರೆ, ಡಿ.1  :  ಬೆಳುವಾಯಿಯ ಹೆನ್‌ಬೆಟ್ಟು ಮನೆಯ ಬಾಬಣ್ಣ (66) ನ.24ರಂದು ನಿಧನರಾದರು.

ಅವರು ಬೆಳುವಾಯಿ ಪರಿಸರದಲ್ಲಿ ಸಾಕಷ್ಟು ಚಿರಪರಿಚಿತರೂ, ಸಮಾಜ ಸೇವಕರೂ ಆಗಿದ್ದವರು.

ನಿವೃತ್ತ ಅಂಚೆ ಪೇದೆಯಾಗಿದ್ದ ಅವರು,  ಅಂಚೆ ಇಲಾಖೆಯಲ್ಲಿ 30 ವರ್ಷಗಳ ಸೇವೆ ಸಲ್ಲಿಸಿದ್ದರು.

 ಮೃತರು ಪತ್ನಿ, ತಾಲೂಕು ಪಂಚಾಯತ್ ಸದಸ್ಯ ಸಂತೋಷ್ ಬಿ. ಬೆಳುವಾಯಿ ಸಹಿತ ಇಬ್ಬರು ಪುತ್ರರು, ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

 ಪೋಸ್ಟ್‌ಮ್ಯಾನ್ ಬಾಬಣ್ಣರಾಗಿ ಜನರೆಡೆಯಲ್ಲಿ ಅಪಾರ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಇವರು ,ಬೆಳುವಾಯಿ ಪರಿಸರದಲ್ಲಿ ಜನಪ್ರೀತಿಗೊಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ