ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಯುವಜನರಿಗೆ ಸಾಹಸ ಕ್ರೀಡೆಗಳಲ್ಲಿ ತರಬೇತಿ

Update: 2016-12-02 13:32 GMT

 ಮಂಗಳೂರು, ಡಿ.2: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯ ವತಿಯಿಂದ 2016-17ನೆ ಸಾಲಿನ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಸಾಹಸ ಕ್ರೀಡೆಗಳಲ್ಲಿ ಯುವಜನರಿಗೆ ಡಿ. 5ರಿಂದ ತರಬೇತಿ ನೀಡಲಾಗುತ್ತಿದೆ.

        ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 18 ರಿಂದ 35 ವರ್ಷದೊಳಗಿನ ಯುವಕ/ಯುವತಿಯರಿಗಾಗಿ ಸಾಹಸ ತರಬೇತಿಗಳಾದ ಸ್ಕೂಬಾ ಡೈಂಗ್, ಸ್ಪೋಟ್ಸ್ ಕ್ಲೈಂಬಿಂಗ್, ಭೂ ಸಾಹಸ ಹಾಗೂ ಜಲಸಾಹಸ ಶಿಬಿರಗಳನ್ನು ರಾಮನಗರ, ಬಾದಾಮಿ, ವರ್ಲಕೊಂಡ, ವಾಣಿವಿಲಾಸ ಸಾಗರ, ಮನಾಲಿ ಮತ್ತು ದಾಂಡೇಲಿಗಳಲ್ಲಿ ಬೇಸಿಕ್, ಅಡ್ವಾನ್ಸ್ ಹಾಗೂ ತರಬೇತುದಾರರ ತರಬೇತಿ ಶಿಬಿರಗಳನ್ನು ಉಚಿತವಾಗಿ ಏರ್ಪಡಿಸಲಾಗುತ್ತಿದೆ. ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಯುವಜನರು ಅರ್ಜಿ ನಮೂನೆ ಮತ್ತು ವಿವರಗಳಿಗೆ ತಿತಿತಿ.ಞಚಿಡಿಟಿಚಿಣಚಿಞಚಿಥಿಣಠಿಡಿಣಚಿಟ.ಟಿ ಅಥವಾ ನೋಂದಣಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು, ಭೂಸಾಹಸ- ದೂ.ಸಂ: ಮುನಿರಾಜು -9480383764, ರಾಜೇಂದ್ರ - 9481535751, ಜಲಸಾಹಸ - ಶಬ್ಬೀರ್ - 9481082078, ಪ್ರಕಾಶ್ ಹರಿಕಂತ್ರ- 7760365079, ದಿನೇಶ್ ಸುವರ್ಣ - 9731362617 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News