ನೋಟು ನಿಷೇಧದ ಬಳಿಕ ಭಾರತದಲ್ಲಿ ಕಾಗದದ ಹಣ ಭಾರೀ ಕಡಿಮೆಯಾಗಲಿದೆ: ಜೇಟ್ಲಿ

Update: 2016-12-02 13:47 GMT

ಹೊಸದಿಲ್ಲಿ, ಡಿ.2: ನೋಟು ನಿಷೇಧದ ಬಳಿಕ ಭಾರತದಲ್ಲಿ ಮೊದಲಿಗಿಂತ ಗಮನಾರ್ಹವಾಗಿ ಕಡಿಮೆ ಕಾಗದದ ಹಣ ಇರಲಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ನ.8ರ ಮಟ್ಟಿಗೆ ಕಾಗದದ ಹಣ ಇಲ್ಲದಾಗುವುದೇ ಈ ಕ್ರಮದ ಲಾಭಗಳಲ್ಲಿ ಒಂದು. ಮಾಮೂಲು ವ್ಯಾಪಾರ ಹಾಗೂ ವ್ಯವಹಾರಗಳ ಗಾತ್ರ ಬೆಳೆಯಲಿದೆ. ಆದರೆ, ಕಾಗದದ ಹಣ ಕುಗ್ಗಲಿದೆ. ಈಗಿನಿಂದ ಒಂದು ವರ್ಷದ ಬಳಿಕ ಭಾರತವು ಉನ್ನತ ಜಿಡಿಪಿ, ಸ್ವಚ್ಛ ಜಿಡಿಪಿ, ನ್ಯಾಯೋಚಿತ ಬಡ್ಡಿದರಗಳೊಂದಿಗೆ ಬೃಹತ್ ಆರ್ಥಿಕತೆಯಾಗಲಿದೆಯೆಂದು ಅವರು ಹೇಳಿದ್ದಾರೆ.

ತೆರುಗೆಗಳ್ಳತನ ಹಾಗೂ ಕಪ್ಪು ಹಣವನ್ನು ನಿವಾರಿಸಲು ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳ ರದ್ದತಿಯ ಪರಿಣಾಮದ ಕುರಿತು ಜೇಟ್ಲಿ ಮಾತನಾಡುತ್ತಿದ್ದರು.

ನೋಟು ರದ್ದತಿಯು ಕಪ್ಪು ಹಣವನ್ನು ಎದುರಿಸಲು ಭಾರತವು 7 ದಶಕಗಳಿಂದ ಬಳಸುತ್ತಿರುವ ಹೊಸ ಸಾಮಾನ್ಯ ಕ್ರಮವಾಗಿದೆಯೆಂದು ಅವರು ಹೇಳಿದ್ದಾರೆ.

ಜನರನ್ನು ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಸಾಲುಗಟ್ಟಿ ಕಾಯುವಂತೆ ಮಾಡಿರುವ ನಗದು ಕೊರತೆಯ ಕುರಿತು ಮಾತನಾಡಿದ ಜೇಟ್ಲಿ, ಇಂತಹ ಭಾರೀ ಜನಸಂಖ್ಯೆಯನ್ನು ತಾವು ಆವರಿಸಬೇಕಾದಾಗ ಸರತಿಯ ಸಾಲುಗಳು ಉಂಟಾಗಬಹುದು. ಆದಾಗ್ಯೂ, ಜನರು ಅದ್ಭುತ ಸಹಕಾರ ನೀಡಿದ್ದಾರೆ. ದೇಶದಲ್ಲಿ ಸಾಮಾಜಿಕ ಅಶಾಂತಿಯನ್ನು ನೀವು ಕಾಣಲಾರಿ. ನೋಟು ರದ್ದತಿಯು ರಾಜಕೀಯ ನಿಧಿ ಸಂಗ್ರಹವನ್ನೂ ಪಾರದರ್ಶಕವಾಗಿರುವುದನ್ನು ಖಚಿತಪಡಿಸಲಿದೆಯೆಂದು ಅಭಿಪ್ರಾಯಿಸಿದ್ದಾರೆ.

ಇಂದು ಪ್ರತಿಯೊಬ್ಬ ವ್ಯಕ್ತಿ ಕನಿಷ್ಠ ಮೂರು ಬಾರಿ ತೆರಿಗೆ ಅಂದಾಜಿಗೆ ಒಳಗಾಗುತ್ತಾನೆ. ಭವಿಷ್ಯದಲ್ಲಿ, ಅದನ್ನು ಸರಳಗೊಳಿಸಿ ಕೇವಲ ಒಮ್ಮೆ ಮಾತ್ರ ಒಳಪಡಿಸುವ ಪ್ರಯತ್ನ ಇದಾಗಿದೆ. ತಾವು ಬದಲಾವಣೆಯ ಶಿಖರದಲ್ಲಿದ್ದೇವೆ. ತೆರಿಗೆ ಅಧಿಕಾರಿಗಳು ಹಾಗೂ ವ್ಯವಸ್ಥೆಯನ್ನು ಸೋಲಿಸಲು ಯತ್ನಿಸುವ ಜನರ ನಡುವಿನ ಯುದ್ಧ ಮುಂದುವರಿಯಲಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News