ಪ್ರವೇಶ ಪರೀಕ್ಷೆಗಳ ತರಬೇತಿಗೆ ವೆಬ್‌ಸೈಟ್

Update: 2016-12-10 12:33 GMT

ಉಡುಪಿ, ಡಿ.10: ಸಿಇಟಿ, ನೀಟ್, ಜೆಇಇ ಮೈನ್ ಮತ್ತು ಐಐಟಿ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ತರಗತಿಗಳ ಕೊರತೆಯನ್ನು ಮನಗಂಡು ಆನ್‌ಲರ್ನ್‌ಎಕ್ಸ್ ಎಂಬ ಪರಿಣಿತ ತಂಡವು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ www.onlearnx.com ವೆಬ್‌ಸೈಟ್‌ನಲ್ಲಿ ನೇರ ಮಾಹಿತಿಯನ್ನು ಪಡೆಯಲು ಅನುಕೂಲ ಮಾಡಿಕೊಟ್ಟಿದೆ ಎಂದು ಶಿಕ್ಷಣ ತಜ್ಞ ಡಾ.ಪ್ರಕಾಶ್ ರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವೆಬ್‌ಸೈಟ್ ಉಪಯೋಗಿಸಿದ್ದಲ್ಲಿ ವಿದ್ಯಾರ್ಥಿಗಳು ನೇರವಾಗಿ ಪರೀಕ್ಷೆ ಗಳನ್ನು ಎದುರಿಸಲು ಸೂಕ್ತ ಸಮಯದಲ್ಲಿ ತರಬೇತಿ ಪಡೆಯಬಹುದು. ವಿಷಯ ಪರಿಣಿತರು ಹಾಗೂ ಅನುಭವಿ ಉಪನ್ಯಾಸಕರಿಂದ ತಯಾರಿಸಲ್ಪಟ್ಟ ಪ್ರಾಯೋಗಿಕ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸರಣಿಗಳು ಇದರಲ್ಲಿ ಲಭ್ಯ. ಪರೀಕ್ಷೆ ಯಲ್ಲಿ ಕೇಳಬಹುದಾದ ಸಾವಿರಾರು ಪ್ರಶ್ನೆಗಳು ಮತ್ತು ಉತ್ತರಗಳು ಈ ವೆಬ್ ಸೈಟ್ ತಂತ್ರಾಶದಲ್ಲಿದೆ ಎಂದರು.

ಈ ಪ್ರವೇಶ ಪರೀಕ್ಷೆಗಳನ್ನು ಪ್ರಾಯೋಗಿಕವಾಗಿ ಮುಂಗಡ ಪಾವತಿ ಪತ್ರ ಅಥವಾ ಟಾಪ್‌ಅಪ್ ಕಾರ್ಡ್‌ಗಳಲ್ಲಿರುವ ಪಾಸ್‌ವಾರ್ಡ್‌ನ್ನು ಬಳಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು. ಈ ಸಂದರ್ಭ ದಲ್ಲಿ ಕಾರ್ಡ್‌ಗಳನ್ನು ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಇಂದು ಅನಾವರಣಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆನ್‌ಲರ್ನ್‌ಎಕ್ಸ್‌ನ ಆಡಳಿತ ವ್ಯವಸ್ಥಾಪಕ ಅಶ್ವತ್ಥ್ ಕೆ.ಎನ್., ಸುಬ್ಬರಾವ್, ಎಲಿಜಬೆತ್, ವಿಕ್ರಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News