ಸಾಧಕ ಪತ್ರಕರ್ತರ ಗಮನಕ್ಕೆ

Update: 2016-12-10 12:42 GMT

ಮಂಗಳೂರು, ಡಿ.10: ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆಯು ಡಿ.18ರಂದು ಬೆಳಗ್ಗೆ 10:30ಕ್ಕೆ ಲಾಲ್‌ಬಾಗ್‌ನ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಭವನ ಹಾಲ್‌ನಲ್ಲಿ ನಡೆಯಲಿದೆ. ಈ ಸಂದರ್ಭ 2015ರ ಡಿ.1ರಿಂದ 2016ರ ನ.30ರವರೆಗೆ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಸಾಧಕ ಪತ್ರಕರ್ತರು/ಪತ್ರಿಕಾ ಛಾಯಾಗ್ರಾಹಕರು ಡಿ.15ರ ಸಂಜೆ 4ಗಂಟೆಯೊಳಗೆ ಪ್ರೆಸ್‌ಕ್ಲಬ್‌ಗೆ ವಿವರ ನೀಡಲು ಸೂಚಿಸಲಾಗಿದೆ. ಮಾಹಿತಿಗೆ ಪ್ರೆಸ್‌ಕ್ಲಬ್ (ದೂ.ಸಂ: 0824-2450111) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News