ಕುಶಾಲನಗರದಲ್ಲಿ ಸಂಭ್ರಮದ ಮಿಲಾದುನ್ನಬಿ ಆಚರಣೆ

Update: 2016-12-12 17:24 GMT

ಕುಶಾಲನಗರ ಡಿ.11: ದಾರುಲ್ ಉಲೂಮ್ ಮದ್ರಸ ಹಾಗೂ ಹಿಲಾಲ್ ಮಸೀದಿ ಇವರ ಸಂಯುಕ್ತಾಶ್ರಯದಲ್ಲಿ ಮೀಲಾದುನ್ನಬಿ ದಿನವನ್ನು ಶಾದಿಮಹಾಲ್‌ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕುಶಾಲನಗರದ ಹಿಲಾಲ್ ಮಸೀದಿಯ ಧರ್ಮಗುರು ಮುಹಮ್ಮದ್ ಫೈಝಿ ಮಾತನಾಡಿ, ಸಮಾಜದಲ್ಲಿ ಶಾಂತಿ ಸಹಬಾಳ್ವೆಯಿಂದ ಒಗ್ಗಟ್ಟಾಗಿ ಬಾಳಬೇಕು. ಹಾಗೇ ಪತ್ರಿಯೊಬ್ಬರನ್ನು ಪ್ರೀತಿ-ವಿಶ್ವಾಸದಿಂದ ಕಾಣುವಂತವರಾಗಬೇಕೆಂದು ಕರೆ ನೀಡಿದ್ದರು.ಅಲ್ಲದೆ ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಸಿದ್ಧಾಂತಗಳು ಹಾಗೂ ಅದರ್ಶಗಳನ್ನು ಮರೆಯದೆ ಮೈಗೂಡಿಸಿಕೊಳ್ಳಬೇಕೆಂದು ತಿಳಿ ಹೇಳಿದರು.
ಹಿಲಾಲ್ ಮಸೀದಿಯ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಮಾತನಾಡಿ, ಪ್ರಪಂಚದಲ್ಲೇ ಮಾದರಿ ಎನಿಸಿದ ಮಹಾನ್ ಪ್ರವಾದಿ ಮುಹಮ್ಮದ್ ಪೈಗಂಬರ್‌ರ ಚಿಂತನೆಗಳನ್ನು ಹೆಚ್ಚು ತಿಳಿದುಕೊಂಡು ಪಾಲಿಸುವ ಆವಶ್ಯಕತೆ ನಮ್ಮದಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಮದ್ರಸದ ವಿದ್ಯಾರ್ಥಿಗಳಿಂದ ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಜೀವನ ಸಂದೇಶದ ಹಾಡು, ತತ್ವ-ಸಿದ್ಧಾಂತಗಳನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು. ಸುಮಾರು 500ಕ್ಕೂ ಅಧಿಕ ಜನರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News