ಈ ದಿನಪತ್ರಿಕೆಯ ಪ್ರಕಾರ ಮಹಿಳೆಯರು ಹೀಗೆ ಮಾಡಿದರೆ ಅವರಿಗೆ ಗಂಡು ಮಗುವಾಗುತ್ತದೆ !

Update: 2016-12-14 12:46 GMT

ಹೊಸದಿಲ್ಲಿ, ಡಿ.14: ತಂದೆಯ ವೀರ್ಯಾಣುವಿನಲ್ಲಿರುವ ಕ್ರೊಮೊಸೋಮ್ ಗಳು ಮಗುವಿನ ಲಿಂಗ ನಿರ್ಧರಿಸುತ್ತದೆಯೆಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಚಾರ. ಆದರೆ ಕೇರಳದ 'ಮಂಗಳಂ' ಎಂಬ ದೈನಿಕವು ತನ್ನ ಓದುಗರಿಗೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲದ ಸಲಹೆಗಳನ್ನು ನೀಡಿ ಈ ಸಲಹೆಗಳನ್ನು ಮಹಿಳೆಯರು ಪಾಲಿಸಿದಲ್ಲಿ ಅವರಿಗೆ ಖಂಡಿತವಾಗಿಯೂ ಗಂಡುಮಗು ಹುಟ್ಟುವುದೆಂದು ಹೇಳಿಕೊಂಡಿದೆಯೆಂದು ಬಿಬಿಸಿ ವರದಿಯೊಂದು ತಿಳಿಸಿದೆ.

'ಮಂಗಳಂ' ತನ್ನ ಆರೋಗ್ಯ ಅಂಕಣದಲ್ಲಿ ಓದುಗರಿಗೆ ಗಂಡುಮಗು ಹುಟ್ಟಲು ಆರು ಸಲಹೆಗಳನ್ನು ನೀಡಿದೆ. ಮಹಿಳೆಯರು ಬಹಳಷ್ಟು ಆಹಾರ ಸೇವಿಸಬೇಕು, ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಮಲಗಬೇಕು, ಬೆಳಗ್ಗಿನ ಉಪಾಹಾರ ಸೇವನೆ ಕೈಬಿಡಲೇಬಾರದು, ವಾರದ ಕೆಲ ದಿನಗಳಲ್ಲಿ ಪುರುಷನ ವೀರ್ಯಾಣು ‘ಶಕ್ತಿಯುತ’ವಾಗಿರುವಾಗ ಮಾತ್ರ ಸಂಭೋಗ ನಡೆಸಬೇಕು ಎಂದು ಹೇಳಿದೆ. ಪುರುಷರು ತಮ್ಮ ವೀರ್ಯಾಣುಗಳನ್ನು ಶಕ್ತಿಯುತವಾಗಿಸಲು ಆಮ್ಲೀಯ ಆಹಾರ ತ್ಯಜಿಸಬೇಕು ಎಂದೂ ಅದು ತಿಳಿಸಿದೆ.

‘‘ಯಾವುದೇ ಒಂದು ವಿಧಾನ ಅನುಸರಿಸಿದರೆ ಗಂಡು ಮಗುವೇ ಹುಟ್ಟುವುದು ಎಂದು ಹೇಳುವುದಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ’’ ಎಂದು ಲಂಡನ್ನಿನ ದಿ ಪೋರ್ಟ್ ಲ್ಯಾಂಡ್ ಹಾಸ್ಪಿಲ್ ಇಲ್ಲಿನ ಪ್ರಸೂತಿ ತಜ್ಞೆ ಡಾ.ಶಾಝಿಯಾ ಮಲಿಕ್ ಹೇಳುತ್ತಾರೆ. ಪುರುಷನೊಬ್ಬನ ವೀರ್ಯಾಣುವಿನ ಶಕ್ತಿಯೂ ಮಗುವಿನ ಲಿಂಗವನ್ನು ನಿರ್ಧರಿಸುವುದಿಲ್ಲ ಎಂದು ವೈದ್ಯರು ವಿವರಿಸುತ್ತಾರೆ.

ಅತ್ತ ಭಾರತದ ಮಹಿಳಾವಾದಿ ವೆಬ್ ಸೈಟ್ ದಿ ಲೇಡೀಸ್ ಫಿಂಗರ್ ಮೂಲತಃ ಮಲಯಾಳಂ ಭಾಷೆಯಲ್ಲಿರುವ ಈ ಲೇಖನವನ್ನು ಇಂಗ್ಲಿಷಿಗೆ ಅನುವಾದಿಸಿ ಪಕಟಿಸಿದೆಯಲ್ಲದೆ ‘‘ಲಿಂಗ ಪತ್ತೆ ನಿಷೇಧಿಸುವ ಕಾನೂನು ಇರುವಂತಹ ಈ ಕಾಲದಲ್ಲಿ ಗಂಡು ಮಗುವನ್ನೇ ಹೆರಲು ಅಂತಿಮವಾಗಿ ಉಪಯುಕ್ತ ಸಲಹೆಗಳು ಬಂದಿವೆ’’ ಎಂದು ಮಾರ್ಮಿಕವಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News