ಕಪಿಲ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲು

Update: 2016-12-14 11:33 GMT

 ಮುಂಬೈ, ಡಿ.14: ತನ್ನ ಬಂಗಲೆಯ ಹಿಂಭಾಗವಿರುವ ನೆಡುತೋಪಿನ ಬಳಿ ಕಸಕಡ್ಡಿ ರಾಶಿ ಹಾಕಿ ಪರಿಸರಕ್ಕೆ ಹಾನಿಯುಂಟು ಮಾಡಿರುವ ಆರೋಪದಡಿ ಕಾಮಿಡಿ ನಟ ಕಪಿಲ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

  ಮುಂಬೈಯ ವರ್ಸೋವಾ ಪ್ರದೇಶದಲ್ಲಿ ಕಪಿಲ್ ಶರ್ಮಾರಿಗೆ ಸೇರಿದ ಬಂಗಲೆಯಿದೆ. ಈ ಬಂಗಲೆಯ ಹಿಂಭಾಗವಿರುವ ನೆಡುತೋಪಿನ ಬಳಿ ಕಪಿಲ್ ಶರ್ಮ ಕಸಕಡ್ಡಿ ರಾಶಿ ಹಾಕಿದ್ದಾರೆ ಮತ್ತು ಇಲ್ಲಿ ಅಕ್ರಮವಾಗಿ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ ಎಂದು ಪರಿಸರ ರಕ್ಷಣಾ ಕಾಯ್ದೆ ಮತ್ತು ಎಂಆರ್‌ಟಿಪಿ ಕಾಯ್ದೆಯಡಿ ಕೇಸು ದಾಖಲಾಗಿದೆ.

ಬಾಂಬೆ ಮುನಿಸಿಪಲ್ ಕಾರ್ಪೊರೇಶನ್‌ನ ಅಧಿಕಾರಿಯೋರ್ವರು ಕಚೇರಿಗೆ ಪರವಾನಿಗೆ ನೀಡಲು 5 ಲಕ್ಷ ರೂ. ಲಂಚ ಕೇಳಿದ್ದರು ಎಂದು ಹೇಳಿಕೆ ನೀಡಿದ್ದಲ್ಲದೆ ಈ ಬಗ್ಗೆ ಪ್ರಧಾನಿ ಮೋದಿಯವರಿಗೂ ಟ್ವೀಟ್ ಮಾಡುವ ಮೂಲಕ ಭಾರೀ ವಿವಾದಕ್ಕೆ ಕಾರಣವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News