ಪ್ರಥಮ ದರ್ಜೆ ಸಹಾಯಕರ , ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ - 2016

Update: 2017-01-25 06:33 GMT

ಹಾಸನ, ಡಿ.14:ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ 442 ಪ್ರಥಮ ದರ್ಜೆ ಸಹಾಯಕರು & 381 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.

ವಿದ್ಯಾರ್ಹತೆ :

ಪ್ರಥಮ ದರ್ಜೆ ಸಹಾಯಕರ: ಯಾವುದೇ ಪದವಿ ಪಡೆದಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕಿರಿಯ ದರ್ಜೆ ಸಹಾಯಕರ ಹುದ್ದೆಗಳಿಗೆ: ಪಿಯುಸಿ ಪಾಸಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ:-ಕನಿಷ್ಟ 18 ವರ್ಷ ತುಂಬಿರಬೇಕು. ಗರಿಷ್ಟ 35 ವರ್ಷ ಮೀರಿರಬಾರದು ಪರಿಶಿಷ್ಟ ಜಾತಿ/ ಪಂಗಡ & ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಕ್ರಮವಾಗಿ 5 & 3 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-ವೆಬ್‌ಸೈಟ್:www.kpsc.kar.nic.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ಜನವರಿ 4, 2017 ಶುಲ್ಕ ಪಾವತಿಸಲು ಕೊನೆ ಜನವರಿ 5, 2017                       

ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ

ಹೆಚ್ಚಿನ ಮಾಹಿತಿಗಾಗಿ:  ಇಲಾಖಾವಾರು ಹುದ್ದೆಗಳ ವಿವರ, ಮೀಸಲಾತಿ ವಿವರ, ಪರೀಕ್ಷಾ ವಿಧಾನ ಮತ್ತು ನೇಮಕಾತಿಯ ಪರಿಪೂರ್ಣ ಮಾಹಿತಿಗಾಗಿ ಮೇಲೆ ತಿಳಿಸಿದ ಆಯೋಗದ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ನೋಡುವುದು ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು. ವಿಶ್ವವಿದ್ಯಾನಿಲಯ, ಮೈಸೂರು ಇವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News